ಬಾಗಲಕೋಟೆ: ಬಂದ್‌ ವೇಳೆ ಎರಡು ಬಸ್‌ಗಳಿಗೆ ಕಲ್ಲು, 9ರಂದು ಶಾಲೆಗಳಿಗೆ ರಜೆ ಇಲ್ಲ

7
ಬಸ್ ಸಂಚಾರ ಎಂದಿನಂತೆ

ಬಾಗಲಕೋಟೆ: ಬಂದ್‌ ವೇಳೆ ಎರಡು ಬಸ್‌ಗಳಿಗೆ ಕಲ್ಲು, 9ರಂದು ಶಾಲೆಗಳಿಗೆ ರಜೆ ಇಲ್ಲ

Published:
Updated:
Prajavani

ಬಾಗಲಕೋಟೆ: ನಗರದಲ್ಲಿ ಭಾರತ್ ಬಂದ್ ಕರೆ ಮಂಗಳವಾರ ಸಂಜೆ ಹಿಂಸೆಗೆ ತಿರುಗಿದೆ. ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಗೆ ಬಸ್ ಸೇವೆ ಆರಂಭಿಸಲಾಯಿತು. ಮುದ್ದೇಬಿಹಾಳದಿಂದ ಹುನಗುಂದ, ಬಾಗಲಕೋಟೆ ಮೂಲಕ ಗೋವಾದ ಮಾಪಸಾ ಹಾಗೂ ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಹೊರಟಿದ್ದ ಬಸ್‌ಗಳಿಗೆ ನವನಗರದ ಎಪಿಎಂಸಿ ಕ್ರಾಸ್ ಬಳಿ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇದರಿಂದ ಕೂಡಲಸಂಗಮ ಬಸ್‌ನ ಮುಂಭಾಗ ಹಾಗೂ ಹಿಂದಿನ ಗಾಜುಗಳು ಪುಡಿಪುಡಿಯಾದರೆ, ಗೋವಾಗೆ ಹೊರಟಿದ್ದ ಬಸ್‌ನ ಹಿಂಬದಿಯ ಗಾಜು ಒಡೆದಿದೆ.

ಸ್ಥಳಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ.ಮೇತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದಲೇ ಬಸ್ ಸಂಚಾರ ಎಂದಿನಂತೆ ಇರಲಿದೆ. ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಪಿ.ವಿ.ಮೇತ್ರಿ ತಿಳಿಸಿದ್ದಾರೆ. ಶಾಲಾ–ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ರಜೆ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !