ಪೆರ್ನ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

7

ಪೆರ್ನ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

Published:
Updated:

ಉಪ್ಪಿನಂಗಡಿ: ಪೆರ್ನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನವೀನ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಶೆಟ್ಟಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದಿದೆ.

ನಿರ್ದೇಶಕರಾದ ನರಸಿಂಹ ನಾಯಕ್ ಪೆರ್ನ, ಪುಷ್ಪರಾಜ್ ಶೆಟ್ಟಿ, ಉಮೇಶ್ ಸಾಮಂತ್, ಪುರುಷೋತ್ತಮ ಶೆಟ್ಟಿ, ಸುಜಾತಾ, ರಾಬರ್ಟ್‌ ಫರ್ನಾಂಡಿಸ್‌, ಚಂದ್ರಾವತಿ, ಜಾನಕಿ, ಚಂದಪ್ಪ ಪೂಜಾರಿ ಕಳೆಂಜ, ರಮೇಶ್ ನಾಯ್ಕ್ ಇದ್ದರು.

ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹೊನ್ನಪ್ಪ ಗೌಡ ಚುನಾವಣಾ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಕಾರ್ಯದರ್ಶಿ ಜಯಂತಿ ಸ್ವಾಗತಿಸಿದರು. ಹಾಲು ಪರೀಕ್ಷಕ ಗೋಪಾಲ ನಾಯ್ಕ್ ವಂದಿಸಿದರು.
 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !