ಅತ್ಯಾಚಾರಿಗೆ 30 ವರ್ಷ ಜೈಲು ಶಿಕ್ಷೆ

7
ಚಾಕೋಲೆಟ್ ಆಸೆ ತೋರಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಅತ್ಯಾಚಾರಿಗೆ 30 ವರ್ಷ ಜೈಲು ಶಿಕ್ಷೆ

Published:
Updated:

ಚಿಕ್ಕಬಳ್ಳಾಪುರ: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ 40 ವರ್ಷದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಅವರು ಬುಧವಾರ 30 ವರ್ಷ ಜೈಲು ಶಿಕ್ಷೆ, ₹ 9 ಸಾವಿರ ದಂಡ ವಿಧಿಸಿದ್ದಾರೆ.

ನವೆಂಬರ್ 4 ರಂದು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಆರೋಪಿ ಶ್ರೀನಿವಾಸ್ ಚಾಕೋಲೆಟ್ ಆಸೆ ತೋರಿಸಿ ಬಾಲಕಿಯನ್ನು ತನ್ನ ಜಮೀನಿನಲ್ಲಿರುವ ದನಗಳ ಶೆಡ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಸಂತ್ರಸ್ತ ಬಾಲಕಿಯ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿಗಳು ಆರೋಪಿಯ ವಿರುದ್ಧ ಡಿಸೆಂಬರ್ 19 ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜನವರಿ 4 ರಿಂದ ಈ ಪ್ರಕರಣದ ವಿಚಾರಣೆ ಆರಂಭಗೊಂಡಿತ್ತು. ಸತತ ಮೂರು ದಿನಗಳ ವಿಚಾರಣೆಯಲ್ಲಿ 17 ಸಾಕ್ಷಿಗಳಿಂದ ಹೇಳಿಕೆ ಪಡೆದ ನ್ಯಾಯಾಧೀಶರು ಬುಧವಾರ ತಮ್ಮ ಆದೇಶ ಪ್ರಕಟಿಸಿದರು. ಘಟನೆ ನಡೆದು 64 ದಿನಗಳಲ್ಲಿ ಆರೋಪಿಗೆ ಶಿಕ್ಷೆಯ ತೀರ್ಪು ಹೊರಬಿದ್ದಿದೆ.

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !