ನಾಗಲಮಡಿಕೆಯಲ್ಲಿ ರಥೋತ್ಸವ

7

ನಾಗಲಮಡಿಕೆಯಲ್ಲಿ ರಥೋತ್ಸವ

Published:
Updated:
Prajavani

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಶುಕ್ರವಾರ ಸಿದ್ಧತೆ ಭರದಿಂದ ನಡೆಸಲಾಯಿತು.

ಗ್ರಾಮದ ದೇಗುಲದಲ್ಲಿ 13 ದಿನ ಕಾಲ ನಡೆಯಲಿರುವ ದನಗಳ ಜಾತ್ರೆ, ಪೂಜಾ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು.

ಶನಿವಾರ 12.10ಕ್ಕೆ ನಡೆಯಲಿರುವ ಬ್ರಹ್ಮ ರಥೋತ್ಸವಕ್ಕೆ ಪೂರ್ವ ಸಿದ್ಧತಾ ಕೆಲಸಗಳು ಶುಕ್ರವಾರ ನಡೆದವು.

ಧ್ವಜಾರೋಹಣ, ವಲ್ಲೀ ದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿ ಕಲ್ಯಾಣೋತ್ಸವ, ಕಳಶ ಸ್ಥಾಪನೆ, ಹೋಮ ಇತ್ಯಾದಿ ಪೂಜೆಗಳನ್ನು ಶುಕ್ರವಾರ ದೇಗುಲ ಪ್ರಾಂಗಣದಲ್ಲಿ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !