ಬೆಂಗಳೂರು ಚಲೋ ಜಾಥಾ ರಾಯಚೂರಿಗೆ ಭೇಟಿ

7

ಬೆಂಗಳೂರು ಚಲೋ ಜಾಥಾ ರಾಯಚೂರಿಗೆ ಭೇಟಿ

Published:
Updated:

ರಾಯಚೂರು: ಕೊಟ್ಟ ಮಾತು ಉಳಿಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಹಾಗೂ ಲೆಕ್ಕ ಕೊಡಿ, ಉತ್ತರ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಹೋರಾಟದ ಜಾಥಾ ಜನವರಿ 12ರಂದು ಯಾದಗಿರಿಯಲ್ಲಿ ಆರಂಭವಾಗಲಿದ್ದು, ಈ ಜಾಥಾ ರಾಯಚೂರು ಭೇಟಿ ನೀಡಲಿದೆ ಎಂದು ಉದ್ಯೋಗಕ್ಕಾಗಿ ಯುವಜನರು ವೇದಿಕೆ ಸಂಚಾಲಕ ಲಕ್ಷ್ಮಣ ಮಂಡಲಗೇರಾ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಜಾಥಾ ಚಾಮರಾಜನಗರದಿಂದ ಜನವರಿ 16ರಂದು ಹೊರಡಲಿದೆ. ಬಜೆಟ್ ಅಧಿವೇಶನ ಮುಂಚೆ ಬೆಂಗಳೂರು ಚಲೋ ಹೋರಾಟ ಮಾಡಿ ಚುನಾವಣಾ ಪೂರ್ವ ನೀಡಿರುವ ಭರವಸೆಗಳನ್ನು ನೆನಪಿಸುವ ಕೆಲಸ ಮಾಡಲಾಗುತ್ತದೆ ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರ ಉದ್ಯೋಗ ಸೃಷ್ಟಿಯ ಯೋಜನೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಯಾವಾಗ ಒದಗಿಸುತ್ತದೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯ ಲೆಕ್ಕ ಕೊಟ್ಟು, ಕಾನೂನು ತಿದ್ದುಪಡಿ ಮೂಲಕ ಉದ್ಯೋಗ ಭದ್ರತೆ ಕಿತ್ತು ಹಾಕಿದ್ದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಬಸವರಾಜ, ಶರಣಬಸವ, ರವಿಕಾಂತ, ಸಂಧ್ಯಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !