ಬಾಲಕಿ ಮೇಲೆ ಅತ್ಯಾಚಾರ

7
ಆಕಾಶಭವನ ಶರಣ್‌ನಿಂದ ಕೃತ್ಯ

ಬಾಲಕಿ ಮೇಲೆ ಅತ್ಯಾಚಾರ

Published:
Updated:

ಮಂಗಳೂರು: ಕುಖ್ಯಾತ ಕ್ರಿಮಿನಲ್‌ ಆರೋಪಿಯಾಗಿರುವ ಆಕಾಶಭವನ ಶರಣ್‌ ಎಂಬಾತ ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಹೊರಜಿಲ್ಲೆಯ ಲಾಡ್ಜ್‌ ಒಂದಕ್ಕೆ ಕರೆದೊಯ್ದು ಮೂರು ದಿನಗಳ ಕಾಲ ಅತ್ಯಾಚಾರ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಆತನ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು ಹುಲಿ ಕುಣಿತದ ತರಬೇತಿ ನೀಡುತ್ತಿದ್ದ. ಅಲ್ಲಿಗೆ ಬರುತ್ತಿದ್ದ ಬಾಲಕಿಯೊಬ್ಬಳ ಸ್ನೇಹ ಗಳಿಸಿ, ಸಲುಗೆ ಬೆಳೆಸಿಕೊಂಡಿದ್ದ. ಕಳೆದ ವಾರ ಆಕೆಯನ್ನು ಹೊರ ಜಿಲ್ಲೆಗೆ ಕರೆದೊಯ್ದು, ಮೂರು ದಿನಗಳ ಕಾಲ ಲಾಡ್ಜ್ ಒಂದರಲ್ಲಿ ಇರಿಸಿ ಅತ್ಯಾಚಾರ ನಡೆಸಿದ್ದಾನೆ.

ಬಾಲಕಿ ಅಸ್ವಸ್ಥಳಾದ ಬಳಿಕ ಪೋಷಕರಿಗೆ ವಿಚಾರ ಗೊತ್ತಾಗಿದೆ. ಆಕೆಯನ್ನು ನಗರದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕಿಯ ಹೇಳಿಕೆ ಮತ್ತು ಪೋಷಕರ ದೂರು ಆಧರಿಸಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆ ಬಳಿಕ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಸುಳ್ಯ ಕೆವಿಜಿ ಸಂಸ್ಥೆಯ ಡಾ.ರಾಮಕೃಷ್ಣ ಕೊಲೆ ಸೇರಿದಂತೆ ಕೆಲವು ಕೊಲೆ, ಕೊಲೆಯತ್ನ, ಸುಲಿಗೆ ಹಾಗೂ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಸೇರಿ 20ಕ್ಕೂ ಹೆಚ್ಚು ಪ್ರಕರಣಗಳು ಶರಣ್‌ ವಿರುದ್ಧ ದಾಖಲಾಗಿವೆ.

ಈತನ ವಿರುದ್ಧ ಪೋಕ್ಸೊ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೋಮವಾರವೇ ಪ್ರಕರಣ ದಾಖಲಿಸಲಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !