ರುಕ್ಮಯ್ಯ ಬಂಗೇರ ನಿಧನ

7

ರುಕ್ಮಯ್ಯ ಬಂಗೇರ ನಿಧನ

Published:
Updated:
Prajavani

ಮಂಗಳೂರು: ಸೇನೆಯಲ್ಲಿ ಮುಖ್ಯ ಸುಬೇದಾರ್‌ ಹುದ್ದೆಗೇರಿ ಎರಡನೆ ಮಹಾಯುದ್ಧದಲ್ಲಿ ಪಾಲ್ಗೊಂಡ ಬಳಿಕ ನಿವೃತ್ತರಾಗಿದ್ದ ಹಿರಿಯ ಸೇನಾನಿ ಜಪ್ಪು ಬಪ್ಪಾಲ್ ನಿವಾಸಿ ರುಕ್ಮಯ್ಯ ಬಂಗೇರ (98) ಅವರು ಇಲ್ಲಿನ ಎಡಪದವುವಿನಲ್ಲಿ ಇರುವ ಮಗನ ಮನೆಯಲ್ಲಿ ಶನಿವಾರ ಬೆಳಿಗ್ಗೆ ನಿಧನರಾದರು.

ಇವರಿಗೆ ಕೆಪಿಸಿಸಿ ಸದಸ್ಯ ಆರ್‌.ಕೆ.ಪೃಥ್ವಿರಾಜ್‌ ಸೇರಿದಂತೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಬಡಗ ಎಡಪದವು ಗ್ರಾಮದಲ್ಲಿ ಶನಿವಾರ ಸಂಜೆ ಮೃತರ ಅಂತ್ಯಕ್ರಿಯೆ ನೆರವೇರಿತು.

ರುಕ್ಮಯ್ಯ ಬಂಗೇರ 37 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಎರಡನೇ ಮಹಾಯುದ್ಧ ಮಾತ್ರವಲ್ಲದೇ ಹೈದರಾಬಾದ್‌ ಮತ್ತು ಗೋವಾ ವಿಮೋಚನೆ ಯುದ್ಧಗಳಲ್ಲೂ ಭಾಗಿಯಾಗಿದ್ದರು. ಗ್ಯಾನಿ ಜೈಲ್‌ ಸಿಂಗ್‌ ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ಸೇನೆಯಲ್ಲಿ ಇವರ ಸೇವೆಯನ್ನು ಗೌರವಿಸಿ ರಾಷ್ಟ್ರಪತಿ ಭವನದಲ್ಲಿ ಚಹಾಕೂಟಕ್ಕೆ ಆಹ್ವಾನಿಸಿ, ಗೌರವಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜನಾರ್ದನ ಗೌಡ, ಯು.ಪಿ. ಇಬ್ರಾಹಿಂ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಚಿನ್ ಅಡಪ, ನಾಗೇಶ್ ಶೆಟ್ಟಿ, ಅಪ್ಸತ್, ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮೃತರ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !