ಶಕ್ತಿ ನೋಂದಣಿಯಿಂದ ಪಕ್ಷ ಸಂಘಟನೆ

7
ಕಾಂಗ್ರೆಸ್ ಶಕ್ತಿ ನೋಂದಣಿ ಅಭಿಯಾನಕ್ಕೆ ಚಾಲನೆ

ಶಕ್ತಿ ನೋಂದಣಿಯಿಂದ ಪಕ್ಷ ಸಂಘಟನೆ

Published:
Updated:
Prajavani

ಕೋಲಾರ: ‘ಮುಂದಿನ ಲೋಕಸಭೆ ಚುನಾವಣೆಯ ಅಭ್ಯರ್ಥಿಯ ಗೆಲುವನ್ನು ಕಾಂಗ್ರೆಸ್ ಶಕ್ತಿ ಕೇಂದ್ರ ತೀರ್ಮಾನಿಸುತ್ತದೆ’ ಎಂದು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ನಿಂದ ತಾಲ್ಲೂಕಿನ ಚಿನ್ನಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಶಕ್ತಿ ನೋಂದಣಿಗೆ ಚಾಲನೆ ನೀಡಿ ಮಾತನಾಡಿ, ‘ಶಕ್ತಿ ನೋಂದಣಿಯಿಂದ ಪಕ್ಷ ಸಂಘಟನೆಯಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರಿಯಾಗುತ್ತದೆ' ಎಂದರು.

‘ರಾಜಸ್ತಾನ್‌ನಲ್ಲಿ ಶಕ್ತಿ ಕೇಂದ್ರದ ಅಭಿಪ್ರಾಯ ಸಂಗ್ರಹಣೆ ಮೇರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ನೋಂದಣಿ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಸಹಾ ಅಂತಿಮ ತೀರ್ಮಾನಗಳನ್ನು ಕೈಗೊಳ್ಳುವಾಗ ಶಕ್ತಿ ಕೇಂದ್ರ ನಿರ್ಣಾಯಕ ಆಗಲಿದೆ’ ಎಂದು ವಿವರಿಸಿದರು.

‘ಕಾಂಗ್ರೆಸ್ ಶಕ್ತಿ ಕೇಂದ್ರದ ನೋಂದಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಚಿಂತನೆ ನಡೆಯುತ್ತಿದ್ದು ಅಂತಹ ಸಂದರ್ಭಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಸುಲಭವಾಗಿ ಪಡೆದುಕೊಳ್ಳಬಹುದು. ಕೆಲವೊಂದು ಕಾರ್ಯಕ್ರಮಗಳಿಗೆ ಫಲಾನುಭವಿ ಆಯ್ಕೆ ಸಹಾ ಇದೇ ಮಾನದಂಡದ ಆಧಾರದಲ್ಲಿ ಆಗುವ ಸಾಧ್ಯತೆಯಿದೆ’ ಎಂದು ಹೇಳಿದರು.

‘ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ನೋಂದಣಿ ಮಾಡುವ ಗುರಿ ಹೊಂದಲಾಗಿದ್ದು ಈಗಾಗಲೇ 3 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಮಾಡಿಸಲಾಗಿದೆ’ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್ ತಿಳಿಸಿದರು.

ತಾಲ್ಲೂಕಿನ ಮಾರ್ಜೇನಹಳ್ಳಿ, ಕಾಮಧೇನಹಳ್ಳಿ, ಚಿನ್ನಾಪುರ, ತೊರದೇವಂಡಹಳ್ಳಿ, ಮೂರಾಂಡಹಳ್ಳಿ, ಯಡಹಳ್ಳಿ, ಬೀರಮಾನಹಳ್ಳಿ, ಹೂಹಳ್ಳಿ, ವೀರಾಪುರ, ಗದ್ದೆಕಣ್ಣೂರು, ಕೋಡಿರಾಂಪುರ, ಕುಂಬಾರಹಳ್ಳಿ, ಗಾಜಲದಿನ್ನೆಯಲ್ಲಿ ಅಭಿಯಾನ ನಡೆಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಸ್.ಮಂಜುನಾಥ್, ಜಿಲ್ಲಾ ಎಸ್ಸಿ ಘಟಕದ ಕೆ.ಜಯದೇವ್, ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ಮುಖಂಡರಾದ ಅರುಣ್‍ಕುಮಾರ್, ಅನಿಲ್‍ಕುಮಾರ್, ಮುನಿಯಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !