ನೆಟ್‌ಬಾಲ್‌: ಮೈಸೂರು ತಂಡಕ್ಕೆ ಪ್ರಶಸ್ತಿ

7

ನೆಟ್‌ಬಾಲ್‌: ಮೈಸೂರು ತಂಡಕ್ಕೆ ಪ್ರಶಸ್ತಿ

Published:
Updated:
Prajavani

ಮೈಸೂರು: ಮೈಸೂರು ಜಿಲ್ಲಾ ಬಾಲಕರ ತಂಡದವರು ಹುಣಸೂರು ತಾಲ್ಲೂಕಿನ ಗಾವಡಗೆರೆಯಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯ ಜೂನಿಯರ್‌ ನೆಟ್‌ಬಾಲ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಮೈಸೂರು ಜಿಲ್ಲಾ ನೆಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಲೀಗ್‌ ಕಮ್‌ ನಾಕ್‌ಔಟ್‌ ಕಮ್‌ ಸೂಪರ್‌ ಲೀಗ್‌ ಮಾದರಿಯ ಟೂರ್ನಿಯಲ್ಲಿ ಆತಿಥೇಯ ತಂಡದವರು 52 ಪಾಯಿಂಟ್‌ ಗಳಿಸಿ ಈ ಸಾಧನೆ ಮಾಡಿದರು.

51 ಪಾಯಿಂಟ್‌ ಪಡೆದ ಹಾಸನ ಜಿಲ್ಲಾ ತಂಡದವರು ದ್ವಿತೀಯ ಹಾಗೂ 48 ಪಾಯಿಂಟ್‌  ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡದವರು ತೃತೀಯ ಸ್ಥಾನ ಪಡೆದರು.

ಸೂಪರ್‌ ಲೀಗ್‌ ಹಂತದಲ್ಲಿ ಮೈಸೂರು ತಂಡದವರು 18–17 ಪಾಯಿಂಟ್‌ಗಳಿಂದ ಹಾಸನ ಹಾಗೂ 20–19 ಪಾಯಿಂಟ್‌ಗಳಿಂದ ಉಡುಪಿ ತಂಡವನ್ನು ಸೋಲಿಸಿದರು.

ಹಾಸನ ತಂಡದವರು 13–11 ಪಾಯಿಂಟ್‌ಗಳಿಂದ ಬೆಂಗಳೂರು ಗ್ರಾಮಾಂತರ ಹಾಗೂ 21–10 ಪಾಯಿಂಟ್‌ಗಳಿಂದ ಉಡುಪಿ ತಂಡವನ್ನು ಪರಾಭವಗೊಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !