ವೇತನ, ಸೌಲಭ್ಯ ವಿತರಿಸಲು ಆಗ್ರಹ

7
ಪಾವಗಡ: ಹೊರಗುತ್ತಿಗೆ ನೌಕರರ ಪ್ರತಿಭಟನೆ

ವೇತನ, ಸೌಲಭ್ಯ ವಿತರಿಸಲು ಆಗ್ರಹ

Published:
Updated:
Prajavani

ಪಾವಗಡ: ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಸಮರ್ಪಕ ವೇತನ, ಸೌಲಭ್ಯ ವಿತರಿಸಬೇಕು ಎಂದು ಆಗ್ರಹಿಸಿ ನೌಕರರು ಬುಧವಾರ ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು.

ಹಲ ವರ್ಷಗಳಿಂದ ಸರ್ಕಾರಿ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಆದರೆ, ಸಕಾಲಕ್ಕೆ ವೇತನ ವಿತರಿಸುತ್ತಿಲ್ಲ. ದಿನವಿಡೀ ಕಷ್ಟಪಟ್ಟು ದುಡಿಯುವ ಹೊರಗುತ್ತಿಗೆ ನೌಕರರಿಗೆ ಪಿ.ಎಫ್, ಇಸಿಎಸ್ ಸೌಲಭ್ಯ ಕಲ್ಪಿಸಿಲ್ಲ ಎಂದು ನೌಕರರು ಆರೋಪಿಸಿದರು.

ಮೇಲ್ವಿಚಾರಕ, ಇತರೆ ಸರ್ಕಾರಿ ಸಿಬ್ಬಂದಿ ರಜೆ ಕೊಡದೆ ಕಿರುಕುಳ ಕೊಡುತ್ತಾರೆ. ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರೆ ಕೆಲಸದಿಂದ ತೆಗೆಯುವುದಾಗಿ ಹೆದರಿಸುತ್ತಾರೆ. ನಮ್ಮ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ದವಸ, ಧಾನ್ಯ ಕೊಡುವುದಿಲ್ಲ. ದವಸ, ಧಾನ್ಯಗಳ ಕೊರತೆಯಿಂದ ಗುಣಮಟ್ಟದ ಅಡುಗೆ ತಯಾರಿಸಲು ಸಾಧ್ಯವಾಗುವುದಿಲ್ಲ. ಅಡುಗೆ ರುಚಿಯಾಗಿಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಾರೆ. ನಮ್ಮ ಪರಿಸ್ಥಿತಿ ಯಾರಿಗೆ ಹೇಳಿಕೊಳ್ಳಬೇಕು ಎಂದು ನೌಕರರು ಅಳಲು ತೋಡಿಕೊಂಡರು.

ಸಿ.ಪಿ.ಎಂ ಶಿವಕುಮಾರ್, ಹೊರಗುತ್ತಿಗೆ ನೌಕರರಾದ ಅಕ್ಕಮ್ಮ, ಸರೋಜಮ್ಮ, ಅನುಸೂಯಮ್ಮ, ಸರಸ್ವತಿ, ಪಾರ್ವತಿ, ಗಂಗಮ್ಮ, ಸುನಿತಾ, ಮಾರಪ್ಪ, ಉಮಾದೇವಿ, ಸುಮಲತಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !