ವೀರಭದ್ರೇಶ್ವರ ಜಾತ್ರೆ: ಆನೆ ಮೆರವಣಿಗೆ

7

ವೀರಭದ್ರೇಶ್ವರ ಜಾತ್ರೆ: ಆನೆ ಮೆರವಣಿಗೆ

Published:
Updated:
Prajavani

ಚಿಟಗುಪ್ಪ: ಸಮೀಪದ ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವರ ಜಾತ್ರೋತ್ಸವ ನಿಮಿತ್ತ ಮಂಗಳವಾರ ರಾತ್ರಿ ನೇಮದ ಆನೆ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಜಾತ್ರೋತ್ಸವವು ಐದು ದಿನ ನಡೆಯಲಿದ್ದು, ಹಿರೇಮಠ ಸಂಸ್ಥಾನದ ರೇಣುಕಾ ಗಂಗಾಧರ ಶಿವಾಚಾರ್ಯ ಸ್ವಾಮಿಜಿ ಚಾಲನೆ ನೀಡಿದರು.

ಉತ್ಸವದ ವೀರಭದ್ರೇಶ್ವರ ಮೂರ್ತಿಯ ಜತೆಗೆ ಎತ್ತಿನ ಬಂಡಿಯಲ್ಲಿ ಪುರಾತನ ಕಾಲದ ಕಟ್ಟಿಗೆಯ ಆನೆಯ ಮೆರವಣಿಗೆ ಪಟ್ಟಣದ ಪುಟಾಣಗಾರ ಗಲ್ಲಿ, ವೀರಭದ್ರೇಶ್ವರ ರಸ್ತೆ, ಬಾಲಾಜಿ ಮಂದಿರ, ಬಸವೇಶ್ವರ ವೃತ್ತ, ಜವಹಾರ ರೋಡ್, ಶಿವಚಂದ್ರ ನೆಲ್ಲಗಿ ರಸ್ತೆ ಮಾರ್ಗಗಳ ಮೂಲಕ ವಿಜೃಂಭಣೆಯಿಂದ ಮೆರವಣಿಗೆ ನಡೆದು ದೇಗುಲಕ್ಕೆ ಆಗಮಿಸಿತು.

ಮೆರವಣಿಗೆ ಹಾದು ಹೋಗುವ ರಸ್ತೆಯ ಎರಡು ಬದಿಯಲ್ಲಿ ಮಹಿಳೆಯರು ರಂಗೋಲಿ ಚಿತ್ತಾರ ಹಾಕಿ ಸ್ವಾಗತಿಸಿದರು.

ಶರಣಪ್ಪ ಪಾಟೀಲ್, ಅರವಿಂದ ಅಗಡಿ, ಗಿರೀಶ್ ಪಾಟೀಲ, ಸಂಗಮೇಶ್ ಸ್ವಾಮಿ, ವಿಜಯಕುಮಾರ ಸಾಯಗಾಂವಕರ್, ಬಾಬುರಾವ್ ಪೊಚಂಪಳ್ಳಿ, ಮಲ್ಲಿಕಾರ್ಜುನ ಮಾಶಟ್ಟಿ, ಮಹಾಂತೇಶ್ ಪೂಜಾರಿ, ಗೋಪಿ ಮುಳೆ, ನಾಗೇಶ್ ಭಾವಿ, ರಾಮು ಮುಳೆ, ಶರಣಪ್ಪ ರೇಚಟಿ, ಸಿದ್ದಣ್ಣ ಚಕಪಳ್ಳಿ, ಶರಣಪ್ಪ ಗುಡ್ಡ, ಶಿವಕುಮಾರ ಚಕಪಳ್ಳಿ, ದಶರಥ ಬುಡುರ್, ಪ್ರಭು ಗೊಂದಳಿ, ಮಲ್ಲಿಕಾರ್ಜುನ ಚಟ್ಟಿ, ಮಾಧವ ಕಾಳೆ, ಗುಂಡಪ್ಪ ಸೂನಾರ್, ಸಂಗಮೇಶ್ವರ ಸ್ವಾಮಿ, ಬಸಯ್ಯ ಸ್ವಾಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !