ಸೇವೆಯಿಂದ ಜಗತ್ತು ಗೆಲ್ಲಬಹುದು: ಜಿ.ಎಸ್.ನಟೇಶ್

7

ಸೇವೆಯಿಂದ ಜಗತ್ತು ಗೆಲ್ಲಬಹುದು: ಜಿ.ಎಸ್.ನಟೇಶ್

Published:
Updated:
Prajavani

ಬಾಳೆಹೊನ್ನೂರು: ‘ಮಾನವ ಜನ್ಮ ಇರುವುದು ಸಮಾಜದ ಒಳಿತಿಗಾಗಿ. ನಾನು, ನನ್ನದು ಎಂಬ ಭಾವಗಳನ್ನು ಬಿಟ್ಟು ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಲ್ಲಿ ನೆಮ್ಮದಿಯ ಬದುಕು ಸಾಧ್ಯ’ ಎಂದು ಶಿವಮೊಗ್ಗದ ಉಪನ್ಯಾಸಕ ಬಿ.ಎಸ್.ನಟೇಶ್ ತಿಳಿಸಿದರು.

ಪಟ್ಟಣದ ಕಡ್ಲೇಮಕ್ಕಿ ನಾರಾಯಣಗುರು ಬಿಲ್ಲವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕ್ಲಾಸಿಕ್ ಬಾಳೆಹೊನ್ನೂರು ಜೇಸಿಐ 2019ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಉಳಿಸಿ ಬೆಳಸಬೇಕಿದೆ. ಜಗತ್ತಿನಲ್ಲಿ ಒಳ್ಳೆಯ ಕೆಲಸಗಳು ಮಾತ್ರ ಕೊನೆಯವರೆಗೂ ಉಳಿಯುತ್ತವೆ.  ಸೇವೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಮದರ್ ತೆರೇಸಾ ಸಾಧಿಸಿ ತೋರಿಸಿದ್ದಾರೆ. ಮನುಷ್ಯರಾಗಿ ಹುಟ್ಟಿದ ಮೇಲೆ ಜಗತ್ತಿನ ಋಣವನ್ನು ಸೇವೆಯಿಂದ ಮಾತ್ರ ತೀರಿಸಬಹುದು’ ಎಂದರು.

ನೂತನ ಅಧ್ಯಕ್ಷರಾಗಿ ಸಿ.ಪಿ.ರಮೇಶ್ ಅಧಿಕಾರ ಸ್ವೀಕರಿಸಿ ಮಾತನಾಡಿ, ‘ನನ್ನ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜೇಸಿ ಸಂಸ್ಥೆಯ ಉದ್ದೇಶಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ಅದಕ್ಕೆ ಸಂಘದ ಎಲ್ಲಾ ಸದಸ್ಯರ ಸಹಕಾರ ಅಗತ್ಯ’ ಎಂದರು.

ಸಂಘಕ್ಕೆ ನೂತನವಾಗಿ 9 ಸದಸ್ಯರು ಸೇರ್ಪಡೆಗೊಂಡರು. ಜೇಸಿಐ ಭಾರತದ ನಿಕಟಪೂರ್ವ ರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್, ಜೇಸಿರೆಟ್ ನಿರ್ಗಮಿತ ಅಧ್ಯಕ್ಷೆ ಅಂಬಿಕಾ ಮನುಕುಮಾರ್, ನೂತನ ಅಧ್ಯಕ್ಷೆ ನಯನಾ ರಮೇಶ್, ಜೂನಿಯರ್ ಜೇಸಿ ನಿರ್ಗಮಿತ ಅಧ್ಯಕ್ಷ ಅಂಕಿತ್ ದಿಡಿಗೆಮನೆ, ನೂತನ ಅಧ್ಯಕ್ಷೆ ನಿಯಾ ಸಾನ್ವಿತ ಮಿಸ್ಕಿತ್ ಉಪಸ್ಥಿತರಿದ್ದರು.

ಕೆ.ಪ್ರಸಾದ್, ಸಂದೇಶ್‍ ಶೆಟ್ಟಿ, ದಯಾಕರ್ ಸುವರ್ಣ, ರಂಜಿತ್, ವಲಯಾಧ್ಯಕ್ಷ ಜೆಫಿನ್ ಜಾಯ್, ಉಪಾಧ್ಯಕ್ಷ ಕೆ.ಪ್ರವೀಣ್, ಚೇತನ್ ವಸ್ತ್ರ, ಇಬ್ರಾಹಿಂ ಶಾಫಿ, ಶೀತಲ್ ಸುರೇಂದ್ರ, ಜಯಪುರದ ಉಪನ್ಯಾಸಕ ಕಾರ್ತಿಕ್, ಕಾರ್ಯದರ್ಶೀ ರಂಜಿತ್ ಗೌಡ ಬಿಂತ್ರವಳ್ಳಿ, ದೀಪಕ್ ವನಶ್ರೀ, ನಿರ್ಗಮಿತ ಅಧ್ಯಕ್ಷ ಮನುಕುಮಾರ್, ಕೆ.ಎಂ.ರಾಘವೇಂದ್ರ, ಸ್ಥಾಪಕಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಸಿ.ವಿ.ಸುನೀಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !