‘ಸರ್ಕಾರ ಬೀಳುತ್ತದೋ ಇಲ್ಲವೋ ಎಂಬುದನ್ನು ರೇವಣ್ಣ ಹೊಸ ಪಂಚಾಂಗ ನೋಡಿ ಹೇಳುತ್ತಾರೆ’

7
ರಾಜ್ಯ ರಾಜಕಾರಣದ ಬಗ್ಗೆ ವಿ.ಶ್ರೀನಿವಾಸಪ್ರಸಾದ್‌ ಅಭಿಪ್ರಾಯ

‘ಸರ್ಕಾರ ಬೀಳುತ್ತದೋ ಇಲ್ಲವೋ ಎಂಬುದನ್ನು ರೇವಣ್ಣ ಹೊಸ ಪಂಚಾಂಗ ನೋಡಿ ಹೇಳುತ್ತಾರೆ’

Published:
Updated:

ಮೈಸೂರು: ‘ಸರ್ಕಾರ ಬೀಳುತ್ತದೆಯೋ ಇಲ್ಲವೋ ಎಂಬ ವಿಚಾರವನ್ನು ರೇವಣ್ಣ ಅವರನ್ನೇ ಕೇಳಬೇಕು. ಭವಿಷ್ಯ ಹೇಳುವುದರಲ್ಲಿ ಅವರು ನಿಸ್ಸೀಮರು. ಹೊಸ ಪಂಚಾಂಗ ನೋಡಿ ಹೇಳುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಶುಕ್ರವಾರ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ತಲೆ ತಗ್ಗಿಸುವ, ಅಸಹ್ಯಕರ ಬೆಳವಣಿಗೆಗಳು ನಡೆಯುತ್ತಿವೆ. ರಾಜಕಾರಣಿ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಯಾವುದೇ ಪಕ್ಷ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದರು.

‘ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಮೂಕ ಪ್ರೇಕ್ಷಕನಾಗಿ ಗಮನಿಸುತ್ತಿದ್ದೇನೆ. 45 ವರ್ಷಗಳ ರಾಜಕೀಯ ಅನುಭವದಲ್ಲಿ ಇಷ್ಟೊಂದು ಕೀಳುಮಟ್ಟದ ರಾಜಕಾರಣ ನೋಡಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ರಾಜಕಾರಣದ ವೈಖರಿ ನೋಡಿ ಜನ ಬೇಸತ್ತಿದ್ದಾರೆ. ಇಂತಹವರನ್ನು ಆಯ್ಕೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ ದೇಶದಲ್ಲಿ ಒಳ್ಳೆಯ ಅಭಿಪ್ರಾಯ ಇತ್ತು. ಈಗ ಅದೆಲ್ಲಾ ಹಾಳಾಗಿದೆ’ ಎಂದು ವಿಷಾದಿಸಿದರು.

‘ಹೆಬ್ಬುಲಿ ಇರುವ ಹಳ್ಳಕ್ಕೆ ಕತ್ತೆ ಅರಚಿಕೊಂಡು ಬಿದ್ದ ಪರಿಸ್ಥಿತಿ ಜೆಡಿಎಸ್‌ ಪಕ್ಷದ್ದು. ಉತ್ತಮ ಆಡಳಿತ ನೀಡುವಲ್ಲಿ ಮೈತ್ರಿ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಜೆಡಿಎಸ್– ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆಯೇ ಇಲ್ಲ. ಅಧಿಕಾರ ವ್ಯಾಮೋಹಕ್ಕಾಗಿ ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದಾರೆ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 16

  Happy
 • 4

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !