ಇಬ್ಬರು ಮಕ್ಕಳ ಡ್ರಮ್‌ನಲ್ಲಿ ಮುಳುಗಿಸಿ ಕೊಂದು ತಾಯಿ ಆತ್ಮಹತ್ಯೆ

7

ಇಬ್ಬರು ಮಕ್ಕಳ ಡ್ರಮ್‌ನಲ್ಲಿ ಮುಳುಗಿಸಿ ಕೊಂದು ತಾಯಿ ಆತ್ಮಹತ್ಯೆ

Published:
Updated:

ಮಂಡ್ಯ: ವಂಶ ಪಾರಂಪರ್ಯವಾಗಿ ಬಂದಿದ್ದ ಇಸುಬು (ಚರ್ಮದ ಉರಿಯೂತ) ಸಮಸ್ಯೆಗೆ ಮನನೊಂದು ನಾಗಮಂಗಲ ತಾಲ್ಲೂಕು, ಶಿವನಳ್ಳಿ ಗ್ರಾಮದ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳನ್ನು ಮನೆಯ ಮುಂದೆ ಇದ್ದ ಡ್ರಮ್‌ನಲ್ಲಿ ಮುಳುಗಿಸಿ ಕೊಂದು, ನಂತರ ತಾನೂ ನೇಣು ಹಾಕಿಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಟ್ಟಮ್ಮ (24) ತನ್ನಿಬ್ಬರು ಗಂಡು ಮಕ್ಕಳಾದ ಸಂತೋಷ್‌ (3) ಹಾಗೂ ಸಾತ್ವಿಕ್‌ (9 ತಿಂಗಳು) ಅವರನ್ನು ಕೊಂದು, ತಾನು ಮನೆಯ ತೀರಿಗೆ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದು ಇಟ್ಟಿದ್ದು, ಇಸುಬು ಸಮಸ್ಯೆಯಿಂದ ಇಬ್ಬರೂ ಮಕ್ಕಳು ನವೆ ಅನುಭವಿಸುತ್ತಿದ್ದರು. ಅದನ್ನು ನನ್ನಿಂದ ನೋಡಲು ಆಗುತ್ತಿರಲಿಲ್ಲ. ಸಾವಿಗೆ ನಾನೇ ಕಾರಣ ಎಂದು ತಿಳಿಸಿದ್ದಾರೆ.

ಮೊದಲ ಮಗ ಸಂತೋಷ್‌ಗೆ ಚರ್ಮದ ಉರಿಯೂತ ಸಮಸ್ಯೆ ಇತ್ತು. ಆಸ್ಪತ್ರೆಗೆ ತೋರಿಸಿದ್ದರೂ ವಾಸಿಯಾಗಿರಲಿಲ್ಲ. ಎರಡನೇ ಮಗನಿಗೂ ಸಮಸ್ಯೆ ಕಾಣಿಸಿಕೊಂಡಿತು. ವಂಶಪಾರಂಪರ್ಯವಾಗಿ ಬಂದ ಸಮಸ್ಯೆ ವಾಸಿಯಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ಪುಟ್ಟಮ್ಮ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪುಟ್ಟಮ್ಮ ಪತಿ ಮಂಜು ಮಾಯಗೋನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಪತಿ ಇಲ್ಲದಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ತೆರಳಿ ಪರಿಶೀಲಿಸಿದರು. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !