ಕೊಹ್ಲಿ ದಾಖಲೆ ಮುರಿದ ಆಮ್ಲಾ; ಪಾಕ್‌ಗೆ ಜಯ

7

ಕೊಹ್ಲಿ ದಾಖಲೆ ಮುರಿದ ಆಮ್ಲಾ; ಪಾಕ್‌ಗೆ ಜಯ

Published:
Updated:
Prajavani

ಪೋರ್ಟ್ ಎಲಿಜಬೆತ್, ದಕ್ಷಿಣ ಆಫ್ರಿಕಾ: ಪಾಕಿಸ್ತಾನ ಎದುರಿನ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ (108 ರನ್)ಭಾರತದ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿ ನಿಂತರು.

ಆಮ್ಲಾ ಅವರು 167 ಇನಿಂಗ್ಸ್‌ಗಳಲ್ಲಿ 27 ಶತಕಗಳನ್ನು ಗಳಿಸಿದರು. ಇಷ್ಟೇ ಸಂಖ್ಯೆಯ ಶತಕಗಳನ್ನು ದಾಖಲಿಸಲು ವಿರಾಟ್ 169 ಇನಿಂಗ್ಸ್‌ ತೆಗೆದುಕೊಂಡಿದ್ದರು. ವಿರಾಟ್ ಖಾತೆಯಲ್ಲಿ 39 ಶತಕಗಳು ಇವೆ.

ಆಮ್ಲಾ ಹೊಡೆದ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು  50 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 266 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಪಾಕ್ ತಂಡವು ಇಮಾಮ್ ಉಲ್ ಹಕ್ ಮತ್ತು ಮೊಹಮ್ಮದ್ ಹಫೀಜ್ ಅವರ ಅರ್ಧಶತಕಗಳ ಬಲದಿಂದ ಐದು ವಿಕೆಟ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 266 (ಹಾಶೀಂ ಆಮ್ಲಾ ಔಟಾಗದೆ 108; ವ್ಯಾನ್ ಡೆರ್ ದಸೆನ್ 93); ಪಾಕಿಸ್ತಾನ: 49.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 267 (ಇಮಾಮ್ ಉಲ್ ಹಕ್ 86, ಮೊಹಮ್ಮದ್ ಹಫೀಜ್ ಔಟಾಗದೆ 71) ಪಾಕಿಸ್ತಾನಕ್ಕೆ ಐದು ವಿಕೆಟ್‌ಗಳ ಜಯ.  ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !