ದೇವಸ್ಥಾನದಲ್ಲಿ ಹುಂಡಿ ಕಳವು

7

ದೇವಸ್ಥಾನದಲ್ಲಿ ಹುಂಡಿ ಕಳವು

Published:
Updated:

ಶಿವಮೊಗ್ಗ: ಎರಡು ಪ್ರತ್ಯೇಕ ದೇವಸ್ಥಾನಗಳಲ್ಲಿ ಹುಂಡಿ ಕಳವು ಆಗಿರುವ ದೂರು ಕುಂಸಿ ಠಾಣೆಯಲ್ಲಿ ಭಾನುವಾರ ದಾಖಲಾಗಿದೆ.

ತಾಲ್ಲೂಕಿನ ಹಾರನಹಳ್ಳಿಯ ಸಮೀಪ ಬೈರನಕೊಪ್ಪ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಕಳ್ಳರು ಹುಂಡಿ ಕಳವು ಮಾಡಿ, ಅದರಲ್ಲಿದ್ದ ಸುಮಾರು ₹ 2,500 ತೆಗೆದುಕೊಂಡು ಹುಂಡಿಯನ್ನು ಊರಿನ ಹೊರಗೆ ಬಿಸಾಡಿ ಹೋಗಿದ್ದಾರೆ.

ಸಮೀಪದ ಸುತ್ತುಕೋಟೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಈಚೆಗೆ ಕಳ್ಳರು ಹುಂಡಿ ಕಳವು ಮಾಡಿ, ಅದರಲ್ಲಿದ್ದ ಸುಮಾರು ₹ 15 ಸಾವಿರ ಕಳವು ಮಾಡಿದ್ದಾರೆ ಎಂದು ಗ್ರಾಮಸ್ಥರು ಭಾನುವಾರ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !