ನ್ಯೂಜಿಲೆಂಡ್‌ಗೆ ಬಂದಿಳಿದ ವಿರಾಟ್ ಬಳಗ

7

ನ್ಯೂಜಿಲೆಂಡ್‌ಗೆ ಬಂದಿಳಿದ ವಿರಾಟ್ ಬಳಗ

Published:
Updated:
Prajavani

ಆಕ್ಲೆಂಡ್: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳನ್ನು ಗೆದ್ದು ಇತಿಹಾಸ ಬರೆದ ಭಾರತ ತಂಡವು ಭಾನುವಾರ ಆಕ್ಲೆಂಡ್‌ಗೆ ಬಂದಿಳಿಯಿತು.

ಇದೇ 23ರಿಂದ ಇಲ್ಲಿ ಆರಂಭವಾಗಲಿರುವ ಕ್ರಿಕೆಟ್‌ ಸರಣಿಯಲ್ಲಿ ಭಾರತ ತಂಡವು ಆಡಲಿದೆ. ಐದು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ. ಒಟ್ಟು ಮೂರು ವಾರಗಳವರೆಗೆ  ತಂಡವು ಇಲ್ಲಿ ಇರಲಿದೆ.

ತಂಡದ ಆಟಗಾರರು  ಆಕ್ಲೆಂಡ್‌ ವಿಮಾನ ನಿಲ್ದಾಣ ತಲುಪಿದ ವಿಡಿಯೊ ತುಣುಕನ್ನು  ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ. ನಿಲ್ದಾಣದ ದ್ವಾರದಲ್ಲಿ ಭಾರತದ ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಅವರು ಹಸ್ತಾಕ್ಷರ ನೀಡುವ ದೃಶ್ಯಗಳಿವೆ.

ಪಂದ್ಯಗಳು ನಡೆಯುವ ಸ್ಥಳ ಮತ್ತು ದಿನಾಂಕ: ತೌರಂಗ್ (ಜ.26 ಮತ್ತು 28), ಹ್ಯಾಮಿಲ್ಟನ್ (ಜ.31), ವೆಲ್ಲಿಂಗ್ಟನ್ (ಫೆ.3)

ಟ್ವೆಂಟಿ–20: ವೆಲ್ಲಿಂಗ್ಟನ್ (ಫೆ. 6), ಆಕ್ಲೆಂಡ್ (ಫೆ.8) ಮತ್ತು ಹ್ಯಾಮಿಲ್ಟನ್ (ಫೆ. 10).

ಸಮಯ(ಭಾರತೀಯ ಕಾಲಮಾನ):  ಏಕದಿನ ಪಂದ್ಯಗಳು ಬೆಳಿಗ್ಗೆ 7.30ರಿಂದ ಮತ್ತು ಟ್ವೆಂಟಿ–20 ಪಂದ್ಯಗಳು ಮಧ್ಯಾಹ್ನ 12.30ರಿಂದ.

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !