ಮ್ಯಾಕ್ಸಿಕ್ಯಾಬ್–ಟ್ರಕ್ ಡಿಕ್ಕಿ: ಮೂವರ ಸಾವು

7
ಹುಬ್ಬಳ್ಳಿಯ ಶಾಂತಾಶ್ರಮಕ್ಕೆ ಹೊರಟಿದ್ದರು: 10 ಮಂದಿಗೆ ಗಾಯ

ಮ್ಯಾಕ್ಸಿಕ್ಯಾಬ್–ಟ್ರಕ್ ಡಿಕ್ಕಿ: ಮೂವರ ಸಾವು

Published:
Updated:
Prajavani

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೆರೂರು ಬಳಿ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸೋಮವಾರ ಮ್ಯಾಕ್ಸಿಕ್ಯಾಬ್ ಹಾಗೂ ಟ್ರಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವಿಜಯಪುರದ ಕೆಎಚ್‌ಬಿ ಕಾಲೊನಿ ನಿವಾಸಿಗಳಾದ ಶರಣಬಸು ಕಟ್ಟೀಮನಿ (60), ವಿರೂಪಾಕ್ಷಪ್ಪ ವಾಲಿ (55), ಬಸವರಾಜ ಉಪ್ಪಿನ (52) ಸಾವಿಗೀಡಾದವರು. ಗಾಯಾಳುಗಳನ್ನು ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿಯ ಶಾಂತಾಶ್ರಮದಲ್ಲಿ ಮಂಗಳವಾರ ನಡೆಯಲಿರುವ ಶಿವಪುತ್ರಪ್ಪ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯ‍ಪುರದಿಂದ 25 ಮಂದಿ ಮ್ಯಾಕ್ಸಿಕ್ಯಾಬ್ ಬಾಡಿಗೆ ಮಾಡಿಕೊಂಡು ಹೊರಟಿದ್ದರು. ಕೆರೂರು ಹೊರವಲಯದ ಕಣಿವೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮ್ಯಾಕ್ಸಿಕ್ಯಾಬ್‌ ಎದುರಿಗೆ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಪಕ್ಕದ ಹೊಲದ ಒಡ್ಡಿಗೆ ಹೋಗಿ ಬಿದ್ದಿವೆ.

ಅಪಘಾತದಲ್ಲಿ ಶೈಲಾ ಮೋದಿ (60), ಶ್ರೀದೇವಿ ಉಪ್ಪಿನ (66), ಭಾಗ್ಯಶ್ರೀ ಅಳ್ಳಿ (37), ಅನಿಲ್ ಕುದರಿ (30), ದೀಪಾ ಉಕ್ಕಲಿ (27), ಮೀನಾಕ್ಷಿ ಮೋದಿ (62), ಸರೋಜಾ ಉಕ್ಕಲಿ (58), ಅನ್ನಪೂರ್ಣಾ ಉಪ್ಪಿನ (53), ವಿಜಯಾ ಪಟ್ಟೇದ (62) ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡ ಜಯಶ್ರೀ ಎಂಬುವವರನ್ನು ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರಿಯಾಣ ನೋಂದಣಿ ಸಂಖ್ಯೆ ಹೊಂದಿರುವ ಟ್ರಕ್ ಹುಬ್ಬಳ್ಳಿಯಿಂದ ವಿಜಯಪುರದತ್ತ ಹೊರಟಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !