‘ಅರ್ಹ ವಿದ್ಯಾರ್ಥಿಗಳಿಗೆ ಪೂರ್ಣ ವಿದ್ಯಾರ್ಥಿವೇತನ’

7

‘ಅರ್ಹ ವಿದ್ಯಾರ್ಥಿಗಳಿಗೆ ಪೂರ್ಣ ವಿದ್ಯಾರ್ಥಿವೇತನ’

Published:
Updated:
Prajavani

ಮೂಡುಬಿದಿರೆ: ಜಪಾನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳಾದ ಹೀರೋಷಿಯೋಶಿನೊ ಮತ್ತು ಪ್ರಿಯಾಂಕ ಪರಾಶ ಅವರು ಮಿಜಾರಿನಲ್ಲಿರುವ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿಗೆ ಸೋಮವಾರ ಭೇಟಿ ನೀಡಿ, ಜಪಾನ್‌ನಲ್ಲಿ ದೊರೆಯುವ ಉನ್ನತ ಶಿಕ್ಷಣದ ಸೌಲಭ್ಯ ಕುರಿತು ವಿವರವಾದ ಮಾಹಿತಿ ನೀಡಿದರು.

ಭಾರತ ಹಾಗೂ ಜಪಾನ್ ಸರ್ಕಾರಗಳ ನಡುವಿನ ಶೈಕ್ಷಣಿಕ ಒಪ್ಪಂದ, ವಿದ್ಯಾರ್ಥಿ ವೇತನದ ಕುರಿತಂತೆ ಅವರು ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದರು. ಎರಡೂ ಸರ್ಕಾರಗಳ ಒಪ್ಪಂದದಂತೆ ಭಾರತದ ಆಯ್ದ ವಿದ್ಯಾರ್ಥಿಗಳನ್ನು ಜಪಾನ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಆಹ್ವಾನಿಸುವುದು ಸಂವಾದದ ಮುಖ್ಯ ಉದ್ದೇಶವಾಗಿತ್ತು.

ಟೋಕಿಯೊ ಸಹಿತ ಜಪಾನ್‌ನ ವಿವಿಧ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಿಗಬಹುದಾದ ಅವಕಾಶಗಳು ಮತ್ತು ಬೋಧಕವರ್ಗ ಹಾಗೂ ದಾಖಲಾತಿ ಪ್ರಕ್ರಿಯೆ, ಅರ್ಹ ವಿದ್ಯಾರ್ಥಿಗಳಿಗೆ ಜಪಾನ್‌ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ನೀಡುವ ಪೂರ್ಣ ವಿದ್ಯಾರ್ಥಿ ವೇತನಗಳ ಕುರಿತು ಜಪಾನ್ ಪ್ರತಿನಿಧಿಗಳು ಮಾಹಿತಿ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಯೋಜನೆಯ ನಿರ್ದೇಶಕರಾದ ಶಿಗೆಕಿಆಶಿಡ ಮತ್ತು ಸಹಾಯಕ ನಿರ್ವಹಣಾಧಿಕಾರಿ ಸಾಕ್ಸಿವರ್ಮಾ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !