ಅಂಗಡಿಗಳ ಮೇಲೆ ದಾಳಿ: ಮಾರಕಾಸ್ತ್ರ ಜಪ್ತಿ
ಬೆಂಗಳೂರು: ಕಾಟನ್ಪೇಟೆಯಲ್ಲಿ ಮಾರಕಾಸ್ತ್ರ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಸೋಮವಾರ ದಾಳಿ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು, 100ಕ್ಕೂ ಹೆಚ್ಚು ಮಾರಕಾಸ್ತ್ರ ಜಪ್ತಿ ಮಾಡಿದ್ದಾರೆ.
ಡಿಸಿಪಿ ರವಿ ಚನ್ನಣ್ಣನವರ ನೇತೃತ್ವದ ತಂಡ ನಡೆಸಿತ್ತು. ಕಾಟನ್ಪೇಟೆಯ 15 ಅಂಗಡಿಗಳನ್ನು ತಪಾಸಣೆ ಮಾಡಿ ಚಾಕು, ಮಚ್ಚು, ಲಾಂಗ್ ಹಾಗೂ ಇತರೆ ಮಾರಕಾಸ್ತ್ರಗಳನ್ನು ಪತ್ತೆ ಹಚ್ಚಿತು.
‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಗಳು, ಕಾಟನ್ಪೇಟೆಯ ಅಂಗಡಿಗಳಲ್ಲಿ ಮಾರಕಾಸ್ತ್ರಗಳನ್ನು ಖರೀದಿಸುತ್ತಿದ್ದರು. ಅದೇ ಕಾರಣಕ್ಕೆ ಅಂಗಡಿಗಳ ಮೇಲೆ ದಾಳಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಯಿತು. ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದೇವೆ’ ಎಂದು ಪೊಲೀಸರು ಹೇಳಿದರು.
ಬರಹ ಇಷ್ಟವಾಯಿತೆ?
1
0
0
0
0
0 comments
View All