ನಗರದಲ್ಲಿ 460 ಸಿಸಿಟಿವಿ ಅಳವಡಿಕೆ ನಿರ್ಧಾರ

7

ನಗರದಲ್ಲಿ 460 ಸಿಸಿಟಿವಿ ಅಳವಡಿಕೆ ನಿರ್ಧಾರ

Published:
Updated:

ಬೆಂಗಳೂರು: ನಗರದ 2000 ಕಿ.ಮೀ ವ್ಯಾಪ್ತಿಯಲ್ಲಿ ಭದ್ರತೆ, ಸುರಕ್ಷತೆ ಮತ್ತು ಕಸ ವಿಲೇವಾರಿ ಮಾಡುವ ಉದ್ದೇಶದಿಂದ ನಗರದ 2000 ಕಿ.ಮೀ ವ್ಯಾಪ್ತಿಯ ಮುಖ್ಯರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ 460 ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲು ಮಹಾನಗರಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.

₹ 30 ಕೋಟಿ ವೆಚ್ಚದಲ್ಲಿ ಕಣ್ಗಾವಲು ಕ್ಯಾಮೆರಾ ಹಾಗೂ ಸಿ.ಸಿ ಕ್ಯಾಮರಾ ಅಳವಡಿಸಲು ಮಹಾನಗರಪಾಲಿಕೆ ಟೆಂಡರ್‌ ಕರೆದಿದೆ. ಕಸ ವಿಲೇವಾರಿ ಹಾಗೂ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಕ್ಯಾಮರಾಗಳನ್ನು ಹಾಕಲಾಗುತ್ತಿದೆ. ಅಪರಾಧ ವಿಭಾಗ ಹಾಗೂ ಸಂಚಾರ ವಿಭಾಗ ಪೊಲೀಸರ ನೆರವಿನಿಂದ ಕ್ಯಾಮೆರಾ ಅಳವಡಿಸುವ ರಸ್ತೆಗಳನ್ನು ಬಿಬಿಎಂಪಿ ಗುರುತಿಸಲಿದೆ. ರಾಜ್ಯ ಸರ್ಕಾರದ ನಗರೋತ್ಥಾನ ನಿಧಿಯಿಂದ ಕ್ಯಾಮರಾ ಖರೀದಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸಿಸಿಟಿವಿ ಇಲ್ಲದ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಕ್ಯಾಮೆರಾಗಳನ್ನು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ನಿಯಂತ್ರಿಸುತ್ತವೆ. ಈ ಕ್ಯಾಮೆರಾಗಳನ್ನು ಪಾಲಿಕೆ ನಿಯಂತ್ರಣ ಕೊಠಡಿ, ಸಂಚಾರಿ ಪೊಲೀಸ್‌ ನಿಯಂತ್ರಣ ಕೊಠಡಿ ಹಾಗೂ ಪೊಲೀಸ್‌ ಠಾಣೆಗಳೊಂದಿಗೆ ಜೋಡಿಸಲಾಗುವುದು. ಅಲ್ಲಿಂದ ನಿಗಾ ಇಡಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಟೆಂಡರ್‌ ಅಂತಿಮಗೊಂಡ ಆರು ತಿಂಗಳೊಳಗೆ ಕ್ಯಾಮೆರಾಗಳನ್ನು ಅಳವಡಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗುವುದು. ಅಲ್ಲದೆ. ಮೂರು ವರ್ಷಗಳ ಕಾಲ ಅವುಗಳನ್ನು ನಿರ್ವಹಣೆ ಮಾಡುವ ಹೊಣೆಯೂ ಗುತ್ತಿಗೆದಾರರದ್ದು ಎಂದೂ ಮೂಲಗಳು ವಿವರಿಸಿವೆ.  

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !