ವಿಚಾರಣಾ ಆಯೋಗ ಪ್ರಶ್ನಿಸಿದ ವಿಟಿಯು ಕುಲಸಚಿವ

7

ವಿಚಾರಣಾ ಆಯೋಗ ಪ್ರಶ್ನಿಸಿದ ವಿಟಿಯು ಕುಲಸಚಿವ

Published:
Updated:
Prajavani

ಬೆಂಗಳೂರು: ‘ಅಕ್ರಮ ಚಟುವಟಿಕೆ ಆರೋಪದಡಿ ನನ್ನ ವಿರುದ್ಧದ ವಿಚಾರಣೆಗೆ ಆಯೋಗ ರಚನೆ ಮಾಡಿರುವುದು ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಸಚಿವ ಎಚ್‌.ಎನ್‌.ಜಗನ್ನಾಥ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತಂತೆ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ಬಿ.ನಾರಾಯಣ ಸ್ವಾಮಿ, ‘ಕುಲಸಚಿವರು ಅಕ್ರಮ ನಡೆಸಿದ್ದಾರೆಂದು ಅನಾಮಧೇಯರು ನೀಡಿದ ದೂರು ಆಧರಿಸಿ ವಿಚಾರಣೆಗೆ ಆದೇಶಿಸಲಾಗಿರುವುದು ತಪ್ಪು’ ಎಂದರು.

‘ಅವರ ವಿರುದ್ಧದ ಆರೋಪಗಳೇನು, ಏಕೆ ವಿಚಾರಣೆ ನಡೆಸಲಾಗುತ್ತಿದೆ ಎಂಬ ಬಗ್ಗೆ ದೂರುದಾರರು ಯಾವುದೇ ವಿವರಗಳನ್ನು ಒದಗಿಸಿಲ್ಲ. ಆದ್ದರಿಂದ ಆರೋಪಗಳ ವಿವರ ನೀಡದೆ ವಿಚಾರಣೆ ನಡೆಸುವುದು ಕಾನೂನು ಬಾಹಿರವಾಗುತ್ತದೆ’ ಎಂದರು.

ಇದಕ್ಕೆ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು, ‘ಇದು ಅಕ್ರಮ ನಡೆದಿದೆಯೇ ಇಲ್ಲವೇ ಎಂಬ ಬಗ್ಗೆ ಮೇಲ್ನೋಟಕ್ಕೆ ನಡೆಸುತ್ತಿರುವ ಪ್ರಾಥಮಿಕ ವಿಚಾರಣೆ ಅಷ್ಟೇ’ ಎಂದು ಸಮಜಾಯಿಷಿ ನೀಡಿದರು.

ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.

ಜಗನ್ನಾಥ ರೆಡ್ಡಿ ವಿರುದ್ಧದ ವಿಚಾರಣೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಇದೇ ತಿಂಗಳ 7ರಂದು ವಿಚಾರಣಾ ಆಯೋಗ ರಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !