ಅನುಕಂಪದ ಉದ್ಯೋಗದಲ್ಲಿ ಮಲತಾಯಿ ಧೋರಣೆ

7
ಪದವಿ ಕಾಲೇಜುಗಳ ಅನುಕಂಪ ಹುದ್ದೆ ವಂಚಿತರ ಸಂಘ ಆರೋಪ

ಅನುಕಂಪದ ಉದ್ಯೋಗದಲ್ಲಿ ಮಲತಾಯಿ ಧೋರಣೆ

Published:
Updated:

ಬೆಂಗಳೂರು: ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರರ ಅವಲಂಬಿತ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡದೆ, ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ ಎಂದು ರಾಜ್ಯ ಅನುದಾನಿತ ಪದವಿ ಕಾಲೇಜುಗಳಲ್ಲಿ ಬೋಧಕೇತರ ಅನುಕಂಪ ಹುದ್ದೆ ವಂಚಿತರ ಸಂಘ ಆರೋಪಿಸಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಜೆ.ಯುವರಾಜ್‌, ‘ಸರ್ಕಾರದ ಅಂಕಿ ಅಂಶಗಳ ಪ್ರಕಾರ 2001ರಿಂದ ಇಲ್ಲಿಯವರೆಗೂ ಅನುಕಂಪದ ಹುದ್ದೆಗಳಿಗೆ 315 ಅರ್ಜಿಗಳು ಸಲ್ಲಿಕೆಯಾಗಿವೆ. ಅನುಕಂಪದ ಹುದ್ದೆ ಅರ್ಜಿ ಹಾಕಿದವರೇ ಮೃತಪಡುತ್ತಿದ್ದಾರೆ. ಆದರೆ, ಈವರೆಗೂ ಅವರಿಗೆ ನ್ಯಾಯ ದೊರಕಿಲ್ಲ’ ಎಂದು ಬೇಸರ ವ್ಯಕ್ತ‍ಪಡಿಸಿದರು.

‘18 ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಅನುಕಂಪ ಹುದ್ದೆ ವಂಚಿತರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಹೀಗಾಗಿ ಬೀದಿ ಪಾಲು ಮಾಡದೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !