ಕಮಿಷನರ್‌ ಭೇಟಿಯಾದ ಅರ್ಜುನ್ ಸರ್ಜಾ

7

ಕಮಿಷನರ್‌ ಭೇಟಿಯಾದ ಅರ್ಜುನ್ ಸರ್ಜಾ

Published:
Updated:

ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದಾಗಿ ಸುದ್ದಿಯಾಗಿದ್ದ ನಟ ಅರ್ಜುನ್ ಸರ್ಜಾ, ನಗರ ಪೊಲೀಸ್‌ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರನ್ನು ಸೋಮವಾರ ಭೇಟಿಯಾದರು.

ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ಬೆಳಿಗ್ಗೆ ಬಂದಿದ್ದ ಸರ್ಜಾ, ಕಮಿಷನರ್ ಕೊಠಡಿಗೆ ಹೋಗಿ ಹಲವು ನಿಮಿಷಗಳವರೆಗೆ ಮಾತುಕತೆ ನಡೆಸಿದರು.

ಯಾವ ಉದ್ದೇಶಕ್ಕಾಗಿ ಅವರು ಕಮಿಷನರ್‌ ಅವರನ್ನು ಭೇಟಿಯಾದರು ಎಂಬುದು ಗೊತ್ತಾಗಿಲ್ಲ. ಕಚೇರಿಯಿಂದ ಹೊರಬಂದ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.  

ಬರಹ ಇಷ್ಟವಾಯಿತೆ?

  • 11

    Happy
  • 4

    Amused
  • 1

    Sad
  • 2

    Frustrated
  • 4

    Angry

Comments:

0 comments

Write the first review for this !