ಮಗು ಕೊಂದು ತಾಯಿ ಆತ್ಮಹತ್ಯೆ

7

ಮಗು ಕೊಂದು ತಾಯಿ ಆತ್ಮಹತ್ಯೆ

Published:
Updated:

ಬೆಂಗಳೂರು: ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಂದು ಭವಾನಿ (24) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರದಲ್ಲಿ ಶನಿವಾರ (ಜ. 19) ನಡೆದಿದೆ.

‘ಸ್ಥಳೀಯ ಗಂಗಮ್ಮ ಲೇಔಟ್ ನಿವಾಸಿಯಾದ ಭವಾನಿ, ಮೈಸೂರಿನ ನಾಗೇಂದ್ರ ಎಂಬುವರನ್ನು ಪ್ರೀತಿಸಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಮೈಸೂರಿನಲ್ಲಿ ವಾಸವಿದ್ದ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಆಗಿತ್ತು. ಆ ಮಗುವನ್ನೇ ಭವಾನಿ ಕೊಲೆ ಮಾಡಿದ್ದಾಳೆ’ ಎಂದು ಮಹದೇವಪುರ ಪೊಲೀಸರು ಹೇಳಿದರು.

ತವರಿಗೆ ಬಂದಿದ್ದಳು: ‘ಭವಾನಿ ಹಾಗೂ ಮಗು, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಬ್ಬರನ್ನು ತಾಯಿಯೇ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಭವಾನಿ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮನೆಯಲ್ಲಿದ್ದವರೆಲ್ಲ ಶನಿವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಅದೇ ವೇಳೆ ಭವಾನಿ, ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದರು.

ಮರಣಪತ್ರ ಪತ್ತೆ: ‘ಘಟನಾ ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದ್ದು, ಭವಾನಿಯೇ ಆ ಪತ್ರ ಬರೆದಿರುವುದಾಗಿ ಸಂಬಂಧಿಕರು ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ನನಗೆ ಯಾವುದೋ ಕಾಯಿಲೆ ಇದ್ದು, ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈಗ ಪತಿ ಹಾಗೂ ಮಗುವಿಗೂ ಆ ಕಾಯಿಲೆ ಬಂದಿದೆ. ಅದರಿಂದಾಗಿ ಜೀವನದಲ್ಲಿ ತುಂಬಾ ಜಿಗುಪ್ಸೆಗೊಂಡಿದ್ದೇನೆ. ಸತ್ತು ಹೋಗಬೇಕೆಂದು ತೀರ್ಮಾನಿಸಿ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಭವಾನಿ ಬರೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !