ಶಿಖರ್, ಧೋನಿ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕಿತ್ತು: ಗಂಭೀರ್

7

ಶಿಖರ್, ಧೋನಿ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕಿತ್ತು: ಗಂಭೀರ್

Published:
Updated:
Prajavani

 ಬೆಂಗಳೂರು: ಅನುಭವಿ ಕ್ರಿಕೆಟಿಗರಾದ ಶಿಖರ್ ಧವನ್, ಮಹೇಂದ್ರಸಿಂಗ್ ಧೋನಿ ಮತ್ತು ಅಂಬಟಿ ರಾಯುಡು ಅವರು ಆಸ್ಟ್ರೇಲಿಯಾಗೆ ತೆರಳುವ ಮುನ್ನ  ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕಿತ್ತು ಎಂದು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಣ್‌ಎಂಗೇಜ್ ಸಂಸ್ಥೆಯ ‘ಎಫ್‌ಜಿ ಪವರ್‌ ಪ್ಲೇಯರ್’ ಕ್ರಿಕೆಟ್ ಶಿಷ್ಯವೇತನ ಯೋಜನೆಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇದು ವಿಶ್ವಕಪ್  ಕ್ರಿಕೆಟ್ ಟೂರ್ನಿ ನಡೆಯುವ ವರ್ಷವಾಗಿದೆ. ತಂಡದಲ್ಲಿರುವ ಪ್ರತಿಯೊಬ್ಬರು ಉತ್ತಮ ಫಾರ್ಮ್‌ ಕಾಯ್ದುಕೊಳ್ಳಬೇಕು. ಅದಕ್ಕಾಗಿ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು. ಈ ಪಂದ್ಯಗಳಲ್ಲಿ ರನ್ ಗಳಿಸಿದಾಗ ಆತ್ಮಬಲ ಹೆಚ್ಚುತ್ತದೆ.  ನೆಟ್ಸ್‌ನಲ್ಲಿ ಆಡುವುದರಿಂದ ಅಲ್ಲ’ ಎಂದರು.

ಫ್ರತಿಭಾವಂತರಿಗೆ ಸ್ಕಾಲರ್‌ಶಿಪ್

ಕಾರ್ಯಕ್ರಮದಲ್ಲಿ ಮಾತನಾಡಿದ ಫನ್‌ಎಂಗೇಜ್ ಸಂಸ್ಥೆಯ ಕರಣ್ ಸಿಂಗ್, ‘ಫ್ರತಿಭಾವಂತ ಬಾಲಕ ಮತ್ತು ಬಾಲಕಿಯರನ್ನು ಆಯ್ಕೆ ಮಾಡಿ, ಹಣಕಾಸು, ಕ್ರಿಕೆಟ್‌ ಸಲಕರಣೆ, ವೈದ್ಯಕೀಯ, ಪ್ರಯಾಣ ಮತ್ತು ಪಂದ್ಯದ ಶುಲ್ಕಗಳನ್ನು ನೀಡಲಾಗುವುದು. 12 ರಿಂದ 16, 17 ರಿಂದ 19 ಮತ್ತು 20 ರಿಂದ 24 ವರ್ಷಗಳ ವಿಭಾಗಗಳಲ್ಲಿ 120 ಕ್ರಿಕೆಟಿಗರಿಗೆ ಐದು ವರ್ಷಗಳವರೆಗೆ ಸ್ಕಾಲರ್‌ಶಿಪ್‌ ಯೋಜನೆ ನೀಡಲಾಗುವುದು. ಗಂಭೀರ್ ನಮ್ಮ ಈ ಯೋಜನೆಗೆ ಪ್ರಚಾರ ರಾಯಭಾರಿಯಾಗಿಧ್ದಾರೆ. ಅವರ ಮಾರ್ಗದರ್ಶನವೂ ಲಭಿಸಲಿದೆ’ ಎಂದರು.

ಈ ಸಂದರ್ಭದಲ್ಲಿ ಕೆಎಸ್‌ಸಿಎ ಅಧ್ಯಕ್ಷ ಸಂಜಯ್ ದೇಸಾಯಿ, ಕಾರ್ಯದರ್ಶಿ ಸುಧಾಕರ್ ರಾವ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !