ಢಾಕಾದಲ್ಲಿ ಗೋಲಿಬಾರ್: 4 ಸಾವು

7

ಢಾಕಾದಲ್ಲಿ ಗೋಲಿಬಾರ್: 4 ಸಾವು

Published:
Updated:

ಅಯೂಬ್ ವಿರುದ್ಧ ಭಾರಿ ಪ್ರದರ್ಶನ ಢಾಕಾದಲ್ಲಿ ಗೋಲಿಬಾರ್: 4 ಸಾವು

ನವದೆಹಲಿ, ಜ. 24– ಢಾಕಾದಲ್ಲಿ ಅಯೂಬ್ ವಿರೋಧಿ ಮತ ಪ್ರದರ್ಶಕರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ 4 ಮಂದಿ ಸತ್ತು 15 ಮಂದಿ ಗಾಯಗೊಂಡರು.

ಪೂರ್ವ ಪಾಕಿಸ್ತಾನದ ರಾಜಧಾನಿಯಾದ ಢಾಕಾದಲ್ಲಿ 24 ಗಂಟೆಗಳ ಕರ್ಫ್ಯೂ ಜಾರಿಗೆ ತರಲಾಗಿದೆ. ನಾಗರಿಕ ಅಧಿಕಾರಿಗಳ
ನೆರವಿಗೆ ಸೈನ್ಯವನ್ನು ಕರೆಸಲಾಗಿದೆ ಎಂದು ರೇಡಿಯೋ ಪಾಕಿಸ್ತಾನ ತಿಳಿಸಿದೆ.

ಶ್ರೀಮತಿ ಕಿಂಗ್‌ರಿಂದ ನೆಹರೂ ಪ್ರಶಸ್ತಿ ಸ್ವೀಕಾರ

ನವದೆಹಲಿ, ಜ. 24– ಅಮೆರಿಕದ ನೀಗ್ರೋ ನಾಗರಿಕ ಹಕ್ಕುಗಳ ನಾಯಕ ರೆವರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಅವರ ಮರಣೋತ್ತರ ನೀಡಲಾದ 1966ರ ಅಂತರ ರಾಷ್ಟ್ರೀಯ ಸೌಹಾರ್ದ ಕುರಿತ ಜವಾಹರಲಾಲ್ ನೆಹರೂ ಪ್ರಶಸ್ತಿಯನ್ನು ಇಂದು ಶ್ರೀಮತಿ ಕೊರೆಟ್ಟ ಕಿಂಗ್ ಅವರಿಗೆ ಸಲ್ಲಿಸಲಾಯಿತು.

ಇಂದು ವಿಜ್ಞಾನ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ಡಾ. ಜಾಕೀರ್‌ ಹುಸೇನ್, ಉಪರಾಷ್ಟ್ರಪತಿ ವಿ.ವಿ. ಗಿರಿ, ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಡಾ. ‘ಮಾರ್ಟಿನ್ ಲೂಥರ್ ಕಿಂಗ್’ ಅವರನ್ನು ಮಹಾತ್ಮ ಗಾಂಧಿಯವರಿಗೆ ಹೋಲಿಸಿದರು.

ದಿವಂಗತ ಪತಿ ಡಾ. ಕಿಂಗ್ ಅವರಿಗೆ ನೀಡಿದ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಮತಿ ಕೊರೆಟ್ಟ ಕಿಂಗ್ ಅವರು ‘ಈ ಪ್ರಶಸ್ತಿ ಭಾರತ ಸರ್ಕಾರ ಡಾ. ಕಿಂಗ್‌ ಅವರ ಸೇವೆಗೆ ಸಲ್ಲಿಸಿರುವ ಪರಮೋತ್ಕೃಷ್ಟ ಮಾನ್ಯತೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !