ಈದಗಾ ಮೈದಾನಕ್ಕೆ ಲಗ್ಗೆ ಖಚಿತ: ಬಿಜೆಪಿ

7

ಈದಗಾ ಮೈದಾನಕ್ಕೆ ಲಗ್ಗೆ ಖಚಿತ: ಬಿಜೆಪಿ

Published:
Updated:

ಈದಗಾ ಮೈದಾನಕ್ಕೆ ಲಗ್ಗೆ ಖಚಿತ: ಬಿಜೆಪಿ

ಹುಬ್ಬಳ್ಳಿ, ಜ. 24– ಈದಗಾ ಮೈದಾನದಲ್ಲಿ ಬರುವ 26ನೇ ತಾರೀಖು ರಾಷ್ಟ್ರ
ಧ್ವಜಾರೋಹಣಕ್ಕೆ ಸರ್ವಪ‍್ರಯತ್ನಗಳನ್ನೂ ಮಾಡಲಾಗುವುದು ಎಂದು ಇಂದು ತಿಳಿಸಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಸಾವಿರ ಸಾವಿರ ಸಂಖ್ಯೆಯಲ್ಲಿ ಅಂದು ಹುಬ್ಬಳ್ಳಿಗೆ ದೌಡಾಯಿಸಲು ಜನರಿಗೆ ಕರೆ ಕೊಟ್ಟಿದ್ದಾರೆ.

ಸದನದಲ್ಲಿ ‘ಚೋಲಿ...’

ಕಲ್ಕತ್ತ, ಜ. 24 (ಪಿಟಿಐ)– ಪಶ್ಚಿಮ ಬಂಗಾಳದಲ್ಲಿ ಎಡರಂಗದ ಆಡಳಿತಾವಧಿಯಲ್ಲಿ ಸಾಂಸ್ಕೃತಿಕ ಅವನತಿಯಾಗಿದೆ ಎಂದು ಆರೋಪಿಸಿ ಹಿರಿಯ ಕಾಂಗೈ ಸದಸ್ಯ ಸುಬ್ರತೋ ಮುಖರ್ಜಿ ವಿಧಾನಸಭೆಯಲ್ಲಿಯೇ ಟೇ‍ಪ್ ರೆಕಾರ್ಡರ್ ಮೂಲಕ ವಿವಾದಾತ್ಮಕ ‘ಚೋಲಿ ಕೆ ಪೀಛೆ ಕ್ಯಾ ಹೈ...’ ಹಾಡು ಕೇಳಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು.

ಶೂನ್ಯ ವೇಳೆಯಲ್ಲಿ ಟೇಪ್ ರೆಕಾರ್ಡರ್ ಒಂದನ್ನು ತಮ್ಮ ಶಾಲಿನ ಒಳಗಡೆ ಇಟ್ಟುಕೊಂಡು ಸದನದ ಒಳಗೆ ಪ್ರವೇಶಿಸಿದ ಮುಖರ್ಜಿ ಹಾಡು ಕೇಳಲು ಪ್ರಾರಂಭಿಸಿದಾಗ ಕೂಡಲೇ ಟೇಪ್‌ ರೆಕಾರ್ಡರ್ ನೊಂದಿಗೆ ಹೊರಕ್ಕೆ ಹೋಗುವಂತೆ ಸ್ಪೀಕರ್ ಆಜ್ಞೆಯಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !