‘ಅಜ್ಮೇರಾ’ ವಂಚಕರ ವಿರುದ್ಧ ಚಾರ್ಜ್‌ಶೀಟ್

7

‘ಅಜ್ಮೇರಾ’ ವಂಚಕರ ವಿರುದ್ಧ ಚಾರ್ಜ್‌ಶೀಟ್

Published:
Updated:

ಬೆಂಗಳೂರು: ಜಯನಗರ 4ನೇ ಹಂತದ ‘ಅಜ್ಮೇರಾ ಗ್ರೂಪ್ಸ್’ ಕಂಪನಿ ವಂಚನೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ‌350 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

2017ರ ಅಕ್ಟೋಬರ್‌ನಲ್ಲಿ ಈ ಕಂಪನಿ ಪ್ರಾರಂಭಿಸಿದ್ದ ತಬ್ರೇಜ್ ಪಾಷಾ ಹಾಗೂ ಅಬ್ದುಲ್ ದಸ್ತಗೀರ್ ಎಂಬುವರು, ಅಧಿಕ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಕೊನೆಗೆ ಬಡ್ಡಿಯನ್ನೂ ಕೊಡದೆ, ಅಸಲನ್ನೂ ಮರಳಿಸದೆ ವಂಚಿಸಿದ್ದರು. ಈ ಸಂಬಂಧ ಸುಮಾರು 950 ಮಂದಿ ಸಿಸಿಬಿ ಕಚೇರಿಗೆ ದೂರು ಕೊಟ್ಟಿದ್ದರು. ಆ ದೂರುಗಳನ್ವಯ ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ, ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದೆ.

‘ಆರೋಪಿಗಳು ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ₹ 5.24 ಕೋಟಿಯನ್ನು ಜಪ್ತಿ ಮಾಡಿದ್ದೇವೆ. ಅಷ್ಟೇ ಅಲ್ಲದೆ, ಮೈಸೂರಿನ ದೇವನೂರು ಗ್ರಾಮದಲ್ಲಿ 3 ಎಕರೆ 25 ಗುಂಟೆ ಜಮೀನು, ಮರಳವಾಡಿಯ ಚಿಕ್ಕಸಾದೇನಹಳ್ಳಿಯಲ್ಲಿ 1 ಎಕರೆ 18 ಗುಂಟೆ ಜಮೀನು ಹಾಗೂ ಜಯನಗರದಲ್ಲಿ ₹ 2 ಕೋಟಿ ಮೌಲ್ಯದ ನಿವೇಶನ ಖರೀದಿಸಿರುವುದನ್ನೂ ಪತ್ತೆ ಹಚ್ಚಿದ್ದೇವೆ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

‘ಕಂಪನಿ ಜತೆ ವ್ಯವಹಾರ ನಡೆಸಿರುವುದಕ್ಕೆ 950 ಹೂಡಿಕೆದಾರರು ಕರಾರು ಪತ್ರಗಳನ್ನು ಸಿಸಿಬಿ ಕಚೇರಿಗೆ ಸಲ್ಲಿಸಿದ್ದಾರೆ. ಆ ದಾಖಲೆಗಳ ಪ್ರಕಾರ ಆರೋ‍ಪಿಗಳು ಇನ್ನೂ ₹ 26 ಕೋಟಿಯನ್ನು ಗ್ರಾಹಕರಿಗೆ ಮರಳಿಸಬೇಕಿದೆ. ಇನ್ನೂ ಯಾರಾದರೂ ಮೋಸ ಹೋಗಿದ್ದರೆ, ಸಿಸಿಬಿ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ ಅವರನ್ನು ಭೇಟಿಯಾಗಿ ದೂರು ಕೊಡಿ’ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !