ಪಿಸ್ತೂಲ್ ಮಾರುತ್ತಿದ್ದವರ ಬಂಧನ

7

ಪಿಸ್ತೂಲ್ ಮಾರುತ್ತಿದ್ದವರ ಬಂಧನ

Published:
Updated:

ಬೆಂಗಳೂರು: ಪಿಸ್ತೂಲ್ ಮಾರಲು ಯತ್ನಿಸುತ್ತಿದ್ದ ಜಗದೀಶ್ ಅಲಿಯಾಸ್ ಟಾಮಿ (37) ಹಾಗೂ ಕೀರ್ತಿರಾಜ್ (26) ಎಂಬುವರನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬುಧವಾರ ಮಧ್ಯಾಹ್ನ ನಾಗರಬಾವಿ 2ನೇ ಹಂತದ ಬಂಡೇಮಾರಮ್ಮ ದೇವಸ್ಥಾನದ ಬಳಿ ನಿಂತಿದ್ದರು. ಬ್ಯಾಗ್‌ನಲ್ಲಿ 7.65 ಎಂಎಂ ಪಿಸ್ತೂಲ್ ಇಟ್ಟುಕೊಂಡಿದ್ದ ಅವರು, ‘ನಮಗೆ ಹಣದ ಅವಶ್ಯಕತೆ ಇದೆ. ಪಿಸ್ತೂಲ್ ಖರೀದಿಸಿ ಹಣ ಕೊಡಿ’ ಎಂದು ಕೆಲ ಸ್ಥಳೀಯರನ್ನು ಪೀಡಿಸುತ್ತಿದ್ದರು.

ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು. ಆರೋಪಿಗಳಿಂದ ಪಿಸ್ತೂಲ್, 4 ಜೀವಂತ ಗುಂಡುಗಳು, 3 ಮೊಬೈಲ್, ₹ 32 ಸಾವಿರ ನಗದು ಹಾಗೂ 2 ಬೈಕ್‌ಗಳನ್ನು ಜಪ್ತಿ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !