ಪತ್ರಿಕೋದ್ಯಮ ವಿದ್ಯಾರ್ಥಿನಿ ಸಾವು; ಆತ್ಮಹತ್ಯೆ ಶಂಕೆ

7

ಪತ್ರಿಕೋದ್ಯಮ ವಿದ್ಯಾರ್ಥಿನಿ ಸಾವು; ಆತ್ಮಹತ್ಯೆ ಶಂಕೆ

Published:
Updated:

ಬೆಂಗಳೂರು: ಕೆ.ನಾರಾಯಣಪುರದ ಕ್ರಿಸ್ಟು ಜಯಂತಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಸೋಫಿಯಾ (20) ಬುಧವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮುಂಬೈನ ಸೋಫಿಯಾ, 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದರು. ಕಾಲೇಜು ಸಮೀಪದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದ ಅವರು, ಬುಧವಾರ ಕಾಲೇಜಿಗೆ ಹೋಗಿರಲಿಲ್ಲ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಕೊಠಡಿ ಸ್ವಚ್ಛಗೊಳಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ವಿದ್ಯಾರ್ಥಿನಿ ಕಣ್ಣು ಬಿಟ್ಟುಕೊಂಡೇ ಮಲಗಿದ್ದಳು. ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿ ಗಾಬರಿಯಾಯಿತು. ಎಷ್ಟೇ ಎಚ್ಚರಿಸಿದರೂ ಪ್ರತಿಕ್ರಿಯಿಸಲೇ ಇಲ್ಲ. ಮೈ ಕೂಡ ತಣ್ಣಗಾಗಿತ್ತು. ಕೂಡಲೇ ಕಟ್ಟಡದ ಮಾಲೀಕರಿಗೆ ವಿಷಯ ತಿಳಿಸಿದೆ. ನಂತರ ಸಮೀಪದ ಆಸ್ಪತ್ರೆಗೆ ಕರೆದೊಯ್ದೆವು. ತಪಾಸಣೆ ನಡೆಸಿದ ವೈದ್ಯರು, ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಕೆಲಸದ ಮಹಿಳೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.  

ಮಾತ್ರೆ ಬಾಟಲಿ ಪತ್ತೆ: ‘ಸೋಫಿಯಾ ಹಾಸಿಗೆ ಮೇಲೆ ಅನಿಮಿಯಾ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳ ಖಾಲಿ ಬಾಟಲಿಗಳು ಪತ್ತೆಯಾಗಿವೆ. ಅವರು ಆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ, ಮೃತರ ರಕ್ತದಲ್ಲಿ ಆ ಮಾತ್ರೆಯ ಅಂಶವಿರುವುದಾಗಿ ಹೇಳಿದ್ದಾರೆ. ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸೋಫಿಯಾ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದಳು. ರಾತ್ರಿ 2 ಗಂಟೆಯಾದರೂ ಮಲಗುತ್ತಿರಲಿಲ್ಲ. ಯಾವ ಕಾರಣಕ್ಕೆ ಬೇಸರ ಮಾಡಿಕೊಂಡಿದ್ದಾಳೆ ಎಂಬುದೂ ನಮಗೆ ಗೊತ್ತಾಗುತ್ತಿರಲಿಲ್ಲ. ಬೆಳಿಗ್ಗೆ 8 ಗಂಟೆಗೆ ನಾನು ಕಾಲೇಜಿಗೆ ಹೊರಟಾಗ, ‘ನನಗೆ ಹುಷಾರಿಲ್ಲ. ಈ ದಿನ ತರಗತಿಗೆ ಬರುವುದಿಲ್ಲ. ಮೇಡಂ ಕೇಳಿದರೆ ಹೇಳಿಬಿಡು’ ಎಂದು ಹೇಳಿ ಕಳುಹಿಸಿದ್ದಳು. ಮಧ್ಯಾಹ್ನ ವಾಪಸ್ ಬಂದಾಗ ಈ ಆಘಾತ ಕಾದಿತ್ತು’ ಎಂದು ಸೋಫಿಯಾ ಸ್ನೇಹಿತೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 6

  Sad
 • 0

  Frustrated
 • 3

  Angry

Comments:

0 comments

Write the first review for this !