ಸಿಎಂ ಕಚೇರಿ ನೌಕರ ಸೇರಿ ಇಬ್ಬರ ಸೆರೆ

7
₹200 ಕೋಟಿ ಮಂಜೂರಿಗೆ ಸಿದ್ದರಾಮಯ್ಯ ಸಹಿ ನಕಲು

ಸಿಎಂ ಕಚೇರಿ ನೌಕರ ಸೇರಿ ಇಬ್ಬರ ಸೆರೆ

Published:
Updated:
Prajavani

ಬೆಂಗಳೂರು: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನು ನಕಲು ಮಾಡಿ ಹಿಂದುಳಿದ ವರ್ಗಗಳ ಇಲಾಖೆಯಿಂದ  ₹200 ಕೋಟಿ ಮಂಜೂರು ಮಾಡಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ತಿಮ್ಮಾಪುರದ ಸಿದ್ಧಾರೂಢ ಸಂಗೊಳ್ಳಿ ಹಾಗೂ ಬೆಂಗಳೂರಿನ ಗುರುನಾಥ್ ಬಂಧಿತರು. ಕಬ್ಬನ್ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್‌ ಅಯ್ಯಣ್ಣ ರೆಡ್ಡಿ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

‘ಬಂಧಿತ ಗುರುನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಶೀಘ್ರಲಿಪಿಗಾರನಾಗಿ ಕೆಲಸ ಮಾಡುತ್ತಿದ್ದ. ಆತನ ಸಹಾಯದಿಂದ ಆರೋಪಿ ಸಿದ್ದಾರೂಢ, ₹200 ಕೋಟಿ ಮಂಜೂರಿಗಾಗಿ ಸಿದ್ದರಾಮಯ್ಯ ಅವರ ಸಹಿಯನ್ನು ನಕಲು ಮಾಡಿ ಶಿಫಾರಸು ಪತ್ರ ಸಿದ್ಧಪಡಿಸಿದ್ದ. ಅದನ್ನೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ನೀಡಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪತ್ರದ ಬಗ್ಗೆ ಅನುಮಾನಗೊಂಡಿದ್ದ ಕಾರ್ಯದರ್ಶಿ, ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಅದರ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತಂಡವೇ ಆರೋಪಿಗಳನ್ನು ಸೆರೆ ಹಿಡಿದಿದೆ’ ಎಂದು ಮಾಹಿತಿ ನೀಡಿದರು.

ಭವನ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದ್ದ: ‘ಆರೋಪಿ ಸಿದ್ದಾರೂಢ, ತಿಮ್ಮಾಪುರ ಗ್ರಾಮದ ಕುರುಬರ ಸಂಘದ ಅಧ್ಯಕ್ಷನೆಂದು ಗೊತ್ತಾಗಿದೆ. ಗ್ರಾಮದಲ್ಲಿ ಕುರುಬರ ಸಮುದಾಯ ಭವನ ನಿರ್ಮಿಸುವುದಕ್ಕಾಗಿ ಆತ, ಎರಡು ವರ್ಷಗಳ ಹಿಂದೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಭವನ ಮಂಜೂರು ಮಾಡಿಸಿಕೊಳ್ಳಲು ತಿಂಗಳಿಗೆ ನಾಲ್ಕೈದು ಬಾರಿ ವಿಧಾನಸೌಧಕ್ಕೂ ಬಂದು ಹೋಗುತ್ತಿದ್ದ. ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಅವಾಗ ಆತ, ಗುರುನಾಥ್‌ನನ್ನು ಪರಿಚಯ ಮಾಡಿಕೊಂಡು ಕೃತ್ಯ ಎಸಗಿದ್ದ. ಪ್ರಕರಣ ಸಂಬಂಧ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !