ದುರುಗಟ್ಟಿ ನೋಡಿದ್ದಕ್ಕೆ ಆಟೊ ಚಾಲಕನ ಹತ್ಯೆ

7

ದುರುಗಟ್ಟಿ ನೋಡಿದ್ದಕ್ಕೆ ಆಟೊ ಚಾಲಕನ ಹತ್ಯೆ

Published:
Updated:
Prajavani

ಬೆಂಗಳೂರು: ತಮ್ಮನ್ನು ದುರುಗುಟ್ಟಿ ನೋಡಿದ ಎಂಬ ಕಾರಣಕ್ಕೆ ಪಾನಮತ್ತ ಯುವಕರಿಬ್ಬರು ಆಟೊ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ನಾಗರಬಾವಿಯ ಎನ್‌ಜಿಇಎಫ್‌ ಲೇಔಟ್‌ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಮಲ್ಲತ್ತಹಳ್ಳಿಯ ಕೆಂಗುಂಟೆ ನಿವಾಸಿ ಎಚ್.ಎಸ್.ರಘು (25) ಕೊಲೆಯಾದವರು. ಮೃತರ ಸ್ನೇಹಿತ ಕಿರಣ್ ಕುಮಾರ್ ದೂರು ಕೊಟ್ಟಿದ್ದು, ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸ್ನೇಹಿತರ ಜತೆ ರಾತ್ರಿ ಎನ್‌ಜಿಇಎಫ್‌ ಲೇಔಟ್‌ನ ‘ಸನ್‌ಶೈನ್ ಬಾರ್ ಆ್ಯಂಡ್ ರೆಸ್ಟೋರೆಂಟ್‌’ಗೆ ಹೋಗಿದ್ದ ರಘು, ಪಾನಮತ್ತರಾಗಿ 11.30ರ ಸುಮಾರಿಗೆ ಆಚೆ ಬಂದಿದ್ದರು. ಈ ವೇಳೆ ಅಲ್ಲೇ ಸಿಗರೇಟ್ ಸೇದುತ್ತ ನಿಂತಿದ್ದ ಯುವಕರು, ‘ಏನೋ ನಮಗೇ ಗುರಾಯಿಸುತ್ತೀಯಾ’ ಎಂದು ಜಗಳ ಪ್ರಾರಂಭಿಸಿದ್ದರು.

ರಘು ಅವರ ಸ್ನೇಹಿತರೂ ಮಧ್ಯಪ್ರವೇಶಿಸಿದ್ದರಿಂದ ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ಹಂತದಲ್ಲಿ ಆರೋಪಿಗಳು ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.ಗಾಯಾಳುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದ ರಘು, ಮತ್ತೆ ರಕ್ತಸ್ರಾವ ಉಂಟಾಗಿದ್ದರಿಂದ ಸ್ವಲ್ಪ ಸಮಯದಲ್ಲೇ ಕೊನೆಯುಸಿರೆಳೆದರು. ಆರೋಪಿಗಳ ಬಂಧನಕ್ಕೆ ಕೆಂಗೇರಿ ಗೇಟ್ ಎಸಿಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳು ರಚನೆಯಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !