₹6 ಸಾವಿರ ಭಿಕ್ಷೆ ಬೇಡ!
ಬೆನಕಟ್ಟಿ (ಬಾಗಲಕೋಟೆ): ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿ ಆಗಿದೆ ಎಂದು ಅಚನೂರ ಏತ ನೀರಾವರಿ ಹೋರಾಟ ಸಮಿತಿ ಟೀಕಿಸಿದೆ.
ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ಮೋದಿ ಸರಕಾರ ದೊಡ್ಡ ಏಟು ಕೊಟ್ಟಿದೆ. ವರ್ಷಕ್ಕೆ ₹6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡುವುದಾಗಿ ಹೇಳಿರುವುದು ನಾಚಿಕೆ ತರುವ ಸಂಗತಿ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್.ಜನಗೌಡ್ರ ಹಾಗೂ ಕಾರ್ಯದರ್ಶಿ ರಾಮಣ್ಣ ಸುನಗದ ಹೇಳಿದ್ದಾರೆ.
ಸರ್ಕಾರ ರೈತರಿಗೆ ಹಣ ನೀಡುವುದು ಬೇಕಿಲ್ಲ. ಯಾರ ಹಂಗಿನಲ್ಲೂ ಅವರು ಬದುಕುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಕೊಟ್ಟರೆ ಸಾಕು ಎಂದಿರುವ ಅವರು, ಈ ಭಿಕ್ಷೆ ರೈತರಿಗೆ ಬೇಡ. ನರೇಂದ್ರ ಮೋದಿ ಅವರು ತಮ್ಮ ಖಾತೆ ಸಂಖ್ಯೆ ಕೊಟ್ಟರೆ ನಾವೇ ಅವರಿಗೆ ಪ್ರತಿ ತಿಂಗಳು ಕಳುಹಿಸುತ್ತೇವೆ ಎಂದಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0
0 comments
View All