ಕೇಂದ್ರ ಬಜೆಟ್: ಜನಾಭಿಪ್ರಾಯವೇನು?

7

ಕೇಂದ್ರ ಬಜೆಟ್: ಜನಾಭಿಪ್ರಾಯವೇನು?

Published:
Updated:
Prajavani

ಚಿಕ್ಕಬಳ್ಳಾಪುರ: ಹಂಗಾಮಿ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಶುಕ್ರವಾರ ಮಂಡಿಸಿದ 2019–20ರ ಮಧ್ಯಂತರ ಬಜೆಟ್‌ಗೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೆಲವರು ಈ ಬಜೆಟ್‌ನ್ನು ಅದ್ಭುತವೆಂದು ಬಣ್ಣಿಸಿದರೆ, ಮತ್ತೊಂದಿಷ್ಟು ಮಂದಿ ಇದು ನಿರಾಶಾದಾಯಕ, ಇದು ಅತ್ಯಂತ ಜನವಿರೋಧಿಯಾಗಿದೆ ಬೇಸರ ವ್ಯಕ್ತಪಡಿಸಿದ್ದಾರೆ.

**

ಆರ್‌ಎಸ್‌ಎಸ್‌ ಪ್ರೇರಿತ ಬಜೆಟ್‌

ರೈತರಿಗೆ ಕೊಟ್ಟಿರುವ ಹಣ ಚಿತ್ರಾನ್ನಕ್ಕೆ ಸಾಲುವುದಿಲ್ಲ. ಕೃಷಿ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ.ದೇಶದಲ್ಲಿ ನಿರುದ್ಯೋಗ ತಾಂಡವವಾಗುತ್ತಿದೆ. ಬಜೆಟ್‌ನಲ್ಲಿ ಎಲ್ಲಿಯೂ ಉದ್ಯೋಗ ಸೃಷ್ಟಿಸುವ ಯೋಜನೆಗಳಿಲ್ಲ. ನಿರುದ್ಯೋಗಿ ಯುವಕರಿಗೆ ಯಾವುದೇ ದಾರಿ ತೋರಿಸಿಲ್ಲ. ಇದು ಜನಪರವಲ್ಲ ಆರ್‌ಎಸ್‌ ಎಸ್‌ ಪ್ರೇರಿತ ಬಜೆಟ್‌.

–ಕ್ರಾಮೆಡ್‌ ಲಕ್ಷ್ಮಯ್ಯ, ಹಿರಿಯ ಹೋರಾಟಗಾರ, ಚಿಕ್ಕಬಳ್ಳಾಪುರ

**

ಬಜೆಟ್ ಜನಪರವಾಗಿಲ್ಲ

ಕೇಂದ್ರ ಬಜೆಟ್ ಜನಪರವಾಗಿಲ್ಲ. ಮಧ್ಯಮ ವರ್ಗದವರಿಗೆ ಹಾಗೂ ವೇತನದಾರರಿಗೆ ಬಜೆಟ್ ತೀವ್ರ ನಿರಾಸೆ ಉಂಟು ಮಾಡಿದೆ. ಕೇಂದ್ರ ಸರ್ಕಾರ ಸಣ್ಣ ರೈತರಿಗೆ ₨6 ಸಾವಿರ ನೀಡುವುದಾಗಿ ತಿಳಿಸಿದೆ. ಆದರೆ ಸರ್ಕಾರದ ಅವಧಿ ಕೇವಲ ಎರಡು ತಿಂಗಳು ಮಾತ್ರವಿದೆ. ಅದನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ? ಕಪ್ಪು ಹಣ ವಾಪಸ್ ತಂದು ಲಕ್ಷಗಟ್ಟಲೇ ಬ್ಯಾಂಕ್ ಖಾತೆ ಜಮಾ ಮಾಡುತ್ತೇವೆ ಎಂದು ಈ ಹಿಂದೆ ಹೇಳಿದ್ದರು ಅದರಂತೆ ಇದು ಕೂಡ ಜನರನ್ನು ಮರಳು ಮಾಡುವ ಹುನ್ನಾರ.

– ಕೋನಪ್ಪಲ್ಲಿ ಕೋದಂಡ, ಕಾಂಗ್ರೆಸ್ ಮುಖಂಡ ಚಿಂತಾಮಣಿ

**

ಅನುಕೂಲಕರ ಬಜೆಟ್‌
₹5 ಲಕ್ಷದ ವರೆಗೆ ಆದಾಯವುಳ್ಳ ಮಧ್ಯಮ ವರ್ಗದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತೆರಿಗೆ ವಿನಾಯಿತಿ ನೀಡುವ ಮೂಲಕ ಬಂಪರ್ ಕೊಡುಗೆ ನೀಡಿದೆ. ಜನಸಾಮಾನ್ಯರ ತೆರಿಗೆ ಹೊರೆ ಇಳಿಸಿದೆ. ₨೨ ಲಕ್ಷ ವರೆಗಿನ ಗೃಹ ಸಾಲಕ್ಕೆ ತೆರಿಗೆ ಇಲ್ಲ. ಶಿಕ್ಷಣ ಸಾಲಕ್ಕೂ ತೆರಿಗೆ ಇಲ್ಲ. ಇದನ್ನೆಲ್ಲ ಗಮನಿಸಿದರೆ ಅದು ಅನುಕೂಲಕರ ಬಜೆಟ್‌.

-ಬಿ.ಆರ್.ಅನಂತಕೃಷ್ಣ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಶಿಡ್ಲಘಟ್ಟ

**

ಸರ್ಮಪಕವಾಗಿ ಹಣ ಮೀಸಲಿಟ್ಟಿಲ್ಲ

ಈ ಮಧ್ಯಂತರ ಬಜೆಟ್‌ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣೋತ್ತರ ಬಜೆಟ್ ಆಗಿದೆ. ಕೆಲ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕನ್ನಡಿಯೊಳಗಿನ ಗಂಟಿನಂತೆ ಬಜೆಟ್ ರೂಪಿಸಲಾಗಿದೆ. ಆ ಹಣ ವಿನಿಯೋಗಿಸಲು ಸಾಧ್ಯವಿಲ್ಲ. ಈ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೂ ಸರ್ಮಪಕವಾಗಿ ಹಣ ಮೀಸಲಿಟ್ಟಿಲ್ಲ. ಕೃಷಿ ಕೂಲಿ ಕಾರ್ಮಿಕರಿಗೆ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ.

– ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ಮುಖಂಡ, ಬಾಗೇಪಲ್ಲಿ

**

ರೈತರಿಗೆ ಆದ್ಯತೆ ನೀಡಬೇಕಿತ್ತು

ಮಧ್ಯಮ ವರ್ಗದವರಿಗೆ ಬಜೆಟ್ ಉತ್ತಮವಾಗಿದೆ. ರೈತರಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಈ ಬಜೆಟ್ ನಲ್ಲಿ ಮಂಡನೆಯಾಗಿರುವ ಯೋಜನೆಗಳು ಚುನಾವಣೆ ಸಂದರ್ಭದಲ್ಲಿ ಯಶಸ್ವಿಯಾಗುತ್ತವೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

-ಎ.ಎಂ.ತ್ಯಾಗರಾಜ್, ಕಸಾಪ ತಾಲ್ಲೂಕು ಅಧ್ಯಕ್ಷ, ಶಿಡ್ಲಘಟ್ಟ

**

ಉತ್ತಮ ಬಜೆಟ್‌

ಕೇಂದ್ರ ಬಜೆಟ್‌ ಜನಪರವಾಗಿದೆ. ತೆರಿಗೆ ವಿನಾಯಿತಿಯಲ್ಲಿ ಭಾರಿ ಬದಲಾವಣೆಯಾಗಿದ್ದು, ಮಧ್ಯಮ ವರ್ಗದ ಹಾಗೂ ಸರ್ಕಾರಿ ನೌಕರರಿಗೆ ವರದಾನವಾಗಿದೆ. ದುಬಾರಿಯಾಗುತ್ತಿದ್ದ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಸಹ ಇಳಿಕೆ ಕಂಡುಬರಲಿದೆ. ಇದೊಂದು ಎಲ್ಲರೂ ಮೆಚ್ಚುವಂತಹ ಉತ್ತಮ ಬಜೆಟ್‌.

–ಎ.ಶ್ರೀರಾಮಪ್ಪ, ನಿವೃತ್ತ ಅಧಿಕಾರಿ ಗೌರಿಬಿದನೂರು

**

ಚುನಾವಣೆ ಗಿಮಿಕ್ ಬಜೆಟ್

ಆಡಳಿತಕ್ಕೆ ಬಂದಂದಿನಿಂದ ಈವರೆಗೆ ರೈತರು, ಮಧ್ಯಮ ವರ್ಗದವರನ್ನು ನಿರ್ಲಕ್ಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಚುನಾವಣೆ ಗಿಮಿಕ್‌ ಬಜೆಟ್‌ ಕೊಟ್ಟಿದ್ದಾರೆ. ಈವರೆಗಿನ ಅವರ ಯಾವ ಭರವಸೆಗಳೂ ಈಡೇರಿಲ್ಲ. ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರದಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಲಿಲ್ಲ.

– ಎಚ್.ಪಿ.ಲಕ್ಷ್ಮೀನಾರಾಯಣ, ಸಿಪಿಎಂ ಮುಖಂಡ ಗುಡಿಬಂಡೆ

**

ನೆಮ್ಮದಿ ನೀಡುವ ಬಜೆಟ್

ಕೇಂದ್ರ ಬಜೆಟ್ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ವಾಣಿಜ್ಯ ಕ್ಷೇತ್ರದಲ್ಲಿ ತೆರಿಗೆ ವಿನಾಯಿತಿಯು ಮತ್ತಷ್ಟು ಸಡಿಲಗೊಂಡಿದ್ದರೆ ಆರಾಮದಾಯಕವಾಗಿತ್ತು. ಮಧ್ಯಮ ವರ್ಗದ ಜನತೆಗೆ ನೆಮ್ಮದಿ ನೀಡುವ ಬಜೆಟ್ ಇದಾಗಿದೆ.

-ಸಂಕೇತ್ ಶ್ರೀರಾಮ್, ಗೌರಿಬಿದನೂರು ನಿವಾಸಿ

**

ಎಲ್ಲರೂ ಮೆಚ್ಚಲೇ ಬೇಕು

ಸ್ವಾತಂತ್ರ್ಯ ನಂತರದಲ್ಲಿ ಈ ಹಿಂದಿನ ಯಾವ ಸರ್ಕಾರಗಳು ಇಂತಹ ಬಜೆಟ್‌ ನೀಡಿಲ್ಲ. ಎಲ್ಲ ವರ್ಗದ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ನೀಡಿದ ಶ್ಲಾಘನೀಯ ಬಜೆಟ್ ಇದು. ಸಣ್ಣ ಹಿಡುವಳಿ ರೈತರು, ಸಾಮಾನ್ಯ ನೌಕರ ವರ್ಗ, ಅಸಂಘಟಿತ ಕಾರ್ಮಿಕರು, ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದನ್ನು ಎಲ್ಲರೂ ಮೆಚ್ಚಲೇ ಬೇಕು.

–ಲಕ್ಷ್ಮೀಪತಿ, ಬಿಜೆಪಿ ಮುಖಂಡ, ಚಿಕ್ಕಬಳ್ಳಾಪುರ

**

ಇವನ್ನೂ ಓದಿ...

ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್‌ ಬಳಿಕ ಆಗಿದ್ದೇನು?

ರಾಷ್ಟ್ರೀಯ ಕಾಮಧೇನು ಆಯೋಗ ರಚನೆ, ಗೋಕುಲ ಮಿಷನ್‌ಗೆ ₹750 ಕೋಟಿ​

ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ​

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಸ್ಥಾ‍ಪನೆ, ರೈತರ ಖಾತೆಗೆ ₹6 ಸಾವಿರ

ಎಸ್‌ಸಿ, ಎಸ್‌ಟಿ ಅನುದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳ​

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ ​

ವೇತನದಾರರಿಗೆ ಬಜೆಟ್‌ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ​

ಕೇಂದ್ರ ಬಜೆಟ್‌ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ​

ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್‌ಗಳು ಬಂದ್‌​

ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’​

ಆಯುಷ್ಮಾನ್ ಭಾರತ್‌ ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ

ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ​

ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ, ಲಕ್ಷ ಡಿಜಿಟಲ್‌ ಗ್ರಾಮ ನಿರ್ಮಾಣಕ್ಕೆ ಒತ್ತು

ಕೇಂದ್ರ ಬಜೆಟ್‌ 2019: ಇವರು ಹೀಗಂದರು...​

* ಈ ಬಜೆಟ್ ಅರ್ಥ ಮಾಡಿಕೊಳ್ಳಬೇಕಿರುವುದು ಹೀಗೆ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !