ರಾಜೀನಾಮೆ ನಿರ್ಧಾರ: ಫೆ.5ಕ್ಕೆ ಮುಹೂರ್ತ

7
ಸದಸ್ಯರೊಂದಿಗೆ ಸಭೆ ನಡೆಸಲು ಮುಂದಾದ ಸಿದ್ದರಾಮಯ್ಯ, ದಿನೇಶ ಗುಂಡೂರಾವ್

ರಾಜೀನಾಮೆ ನಿರ್ಧಾರ: ಫೆ.5ಕ್ಕೆ ಮುಹೂರ್ತ

Published:
Updated:
Prajavani

ಬಾಗಲಕೋಟೆ: ಆರ್.ವಿ.ದೇಶಪಾಂಡೆ ಸೇರಿದಂತೆ ಕಾಂಗ್ರೆಸ್‌ನ ಸಚಿವರು ಹಾಗೂ ಶಾಸಕರು ಬೀಳಗಿಯಲ್ಲಿ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಅವರ ಮನೆಗೆ ತೆರಳಿ ಊಟ ಮಾಡಬಹುದು. ನಾವು ಆ ಪಕ್ಷದ (ಬಿಜೆಪಿ) ಸದಸ್ಯರೊಂದಿಗೆ ಸೇರಿ ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರ ಮಾಡಬಾರದಾ?..

ಇದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ವಿರುದ್ಧ ಬಂಡಾಯ ಸಾರಿ ಬಿಜೆಪಿಯೊಂದಿಗೆ ಕೂಡಿಕೆಗೆ ಮುಂದಾಗಿರುವ ಕಾಂಗ್ರೆಸ್ ಸದಸ್ಯರು, ಬುದ್ಧಿ ಹೇಳಲು ಮುಂದಾದ ಪಕ್ಷದ ವರಿಷ್ಠರಿಗೆ ಕೇಳಿದ ಪ್ರಶ್ನೆ..

ಐಹೊಳೆ ಕ್ಷೇತ್ರದ ಸದಸ್ಯೆ ಬಾಯಕ್ಕಾ ಮೇಟಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರ ಹಿಡಿಯುವ ಪ್ರಕ್ರಿಯೆಗೆ ಬಿಜೆಪಿ ಸದಸ್ಯರು ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದ ಪಕ್ಷದ ಮುಖಂಡರು, ಬಿಜೆಪಿಯೊಂದಿಗೆ ಕೂಡಿಕೆ ಮಾಡಿಕೊಂಡರೆ ಜನರಿಗೆ, ಹೈಕಮಾಂಡ್‌ಗೆ ಉತ್ತರ ಹೇಳುವುದು ಕಷ್ಟ ಆಗಲಿದೆ. ಸಂಯಮ ವಹಿಸಿ. ವೀಣಾ ಮನವೊಲಿಸಿ ರಾಜೀನಾಮೆ ಕೊಡಿಸೋಣ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಜೊತೆ ಇದ್ದೇವೆ:

’ಬಾಯಕ್ಕಾ ಜೊತೆ ನಾವು 11 ಮಂದಿ ಹೋಗದಿದ್ದರೂ ವೀಣಾ ಜೊತೆಗೂ ಇಲ್ಲ. ಪಕ್ಷದ ಪರ ಇದ್ದೇವೆ. ಈ ವಿಚಾರದಲ್ಲಿ ವರಿಷ್ಠರು ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ಧ’ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಹೇಳುತ್ತಾರೆ.

ಬೆಂಬಲ ತೋರಿಸಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕೆ ಪತ್ನಿಯ ರಾಜೀನಾಮೆ ಕೊಡಿಸಬೇಕಾದರೆ ಆಕೆಗೆ ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್ ಖಚಿತಪಡಿಸಿ ಇಲ್ಲವೇ ಹಿಂದಿನ ಒಪ್ಪಂದದ ಅನ್ವಯ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಕೊಡಿಸಿ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವರಿಷ್ಠರಿಗೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಕೈಮೀರಿದ ಅವಕಾಶ:

ಬಂಡಾಯ ಎದ್ದಿರುವ ಸದಸ್ಯರ ಮನವೊಲಿಸುವ ಅವಕಾಶ ಈಗಾಗಲೇ ನಾಯಕರ ಕೈ ಮೀರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಾತಿಗೂ ಸೊಪ್ಪ ಹಾಕದೇ ಕೂಡಿಕೆ ಮಾಡಿಕೊಳ್ಳಲು ಎರಡೂ ಪಕ್ಷಗಳ ಸದಸ್ಯರು ಮುಂದಾಗಿದ್ದಾರೆ. ಈಗಾಗಲೇ ತಾವೇ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಅಧ್ಯಕ್ಷ ಗಾದಿಗೆ ಕಾಂಗ್ರೆಸ್‌ನಿಂದ ಬಾಯಕ್ಕನಿಗೆ ಅವಕಾಶ ಮಾಡಿಕೊಟ್ಟು, ಜಮಖಂಡಿ ಭಾಗದ ಬಿಜೆಪಿ ಸದಸ್ಯರೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆಯೂ ತೀರ್ಮಾನ ಆಗಿದೆ ಎಂಬ ವಿಚಾರ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಕುದುರೆ ವ್ಯಾಪಾರ?:

ಅಧಿಕಾರ ಹಿಡಿಯುವ ಹಾವು–ಏಣಿ ಆಟದ ಪ್ರಯತ್ನದಲ್ಲಿ ಕುದುರೆ ವ್ಯಾಪಾರವೂ ಆಗಿದೆ ಎಂಬ ಆರೋಪವು ಕೇಳಿಬಂದಿದೆ. ಮುಂಗಡ ರೂಪದಲ್ಲಿ ಕೆಲವರು ₹7.5 ಲಕ್ಷ ಪಡೆದಿದ್ದಾರೆ ಎನ್ನಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !