ಎಂಆರ್‌ಪಿಎಲ್‌: ₹ 13 ಕೋಟಿ ಲಾಭ

7
ಮೂರನೇ ತ್ರೈಮಾಸಿಕದ ಫಲಿತಾಂಶ ಪ್ರಕಟ

ಎಂಆರ್‌ಪಿಎಲ್‌: ₹ 13 ಕೋಟಿ ಲಾಭ

Published:
Updated:

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ₹ 13 ಕೋಟಿ ನಿವ್ವಳ ಲಾಭ ಗಳಿಸಿದೆ.

ಒಂಬತ್ತು ತಿಂಗಳ ಅವಧಿಯಲ್ಲಿ ಕಂಪೆನಿಯ ಒಟ್ಟು ವಹಿವಾಟು ₹ 54,565 ಕೋಟಿಗೆ ತಲುಪಿದ್ದು, ಶೇಕಡ 23ರಷ್ಟು ಹೆಚ್ಚಳವಾಗಿದೆ. ಕಂಪೆನಿಯ ರಫ್ತು ವಹಿವಾಟು ಶೇ 77ರಷ್ಟು ಹೆಚ್ಚಳವಾಗಿದೆ. ಒಟ್ಟು ₹ 21,054 ಕೋಟಿ ಮೊತ್ತದ ರಫ್ತು ಚಟುವಟಿಕೆ ನಡೆದಿದೆ. ತೆರಿಗೆ ಕಡಿತಕ್ಕೂ ಮುನ್ನ ₹ 112 ಕೋಟಿ ಲಾಭ ಬಂದಿದ್ದು, ಇದರಲ್ಲಿ ಶೇ 96ರಷ್ಟು ಕುಸಿತವಾಗಿದೆ ಎಂದು ಎಂಆರ್‌ಪಿಎಲ್‌ ಪ್ರಕಟಣೆ ತಿಳಿಸಿದೆ.

ಮೂರನೇ ತ್ರೈಮಾಸಿಕದಲ್ಲಿ ಕಂಪೆನಿ ₹ 20,250 ಕೋಟಿ ಮೊತ್ತದ ವಹಿವಾಟು ನಡೆಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಹಿವಾಟಿನಲ್ಲಿ ಶೇ 16ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ತೆರಿಗೆಗೂ ಕಡಿತಕ್ಕೂ ಮೊದಲು ₹ 1,481 ಕೋಟಿ ಲಾಭ ಗಳಿಸಿದೆ. ಈ ಮೂರು ತಿಂಗಳ ಅವಧಿಯಲ್ಲಿ ₹ 8,852 ಕೋಟಿ ಮೊತ್ತದ ರಫ್ತು ನಡೆದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 54ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !