ಕಲಾದಗಿ: ಇಜ್ತೆಮಾ ನಿಲ್ಲಿಸಲು ಆಗ್ರಹ

7
ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ

ಕಲಾದಗಿ: ಇಜ್ತೆಮಾ ನಿಲ್ಲಿಸಲು ಆಗ್ರಹ

Published:
Updated:
Prajavani

ಬಾಗಲಕೋಟೆ: ಕಲಾದಗಿಯಲ್ಲಿ ಫೆಬ್ರುವರಿ 16 ರಿಂದ ಹಮ್ಮಿಕೊಂಡಿರುವ ಬಡೆ ಇಜ್ತೆಮಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದರೆ, ಅಂದು ಜಿಲ್ಲೆಯ ಗಡಿಭಾಗಗಳನ್ನು ಬಂದ್ ಮಾಡಲಾಗುವುದು’ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಮುಖಂಡ ಅಶೋಕ ಮುತ್ತಿನಮಠ ಹೇಳಿದರು.

ಬಡೆ ಇಜ್ತೆಮಾಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಬಾಗಲಕೋಟೆ ಚಲೋ’ ಅಭಿಯಾನದ ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

‘ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಈ ಹಿಂದೆ ಅನೇಕ ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಅಂದು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಹಿಂದೂ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಬೇಕು’ ಎಂದರು.

ಮುಖಂಡ ಹಣಮಂತ ಮಳಲಿ ಮಾತನಾಡಿ, ‘ ಬಡೆ ಇಜ್ತೆಮಾ ಹೆಸರಿನಲ್ಲಿ ಸಣ್ಣ ಕಾರ್ಯಕ್ರಮ ಎಂದು ಸ್ಥಳೀಯ ರೈತರಿಗೆ ಸುಳ್ಳು ಹೇಳಿ ಭೂಮಿ ಪಡೆದುಕ ಲಕ್ಷಾಂತರ ಜನ ಸೇರುವ ಕಾರ್ಯಕ್ರಮ ಮಾಡಲಾಗುತ್ತಿದೆ. ಅಲ್ಲಿಗೆ ಹಿಂದೂಗಳು ಬಾರದಂತೆ ತಡೆಯೊಡಿದ್ದು, ಹಾಗಾಗಿ ನಾವು ಬಡೆ ಇಜ್ತೆಮಾ ವಿರೋಧಿಸುತ್ತಿದ್ದೇವೆ’ ಎಂದರು.

‘ಕಲಾದಗಿಯಲ್ಲಿ ಎಲ್ಲರೂ ಸಹಬಾಳ್ವೆ ನಡೆಸುತ್ತಿದ್ದಾರೆ, ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಅಲ್ಲಿನ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತದೆ. ನಮ ಸಂತ ಶಿಶುನಾಳ ಶರೀಫರು, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಇಬ್ರಾಹಿಂ ಸುತಾರ್‌ರ ಸಂಸ್ಕೃತಿ ಬೇಕು ವಿನಃ ಟಿಪ್ಪು, ಬಾಬರ್‌ ಸಂಸ್ಕೃತಿ ಅಲ್ಲ’ ಎಂದರು.

ಉಡುಪಿಯ ಭಾರತೀಯ ಕ್ಷಾತ್ರದ ವಿಶ್ವಾಧಿರಾಜ ತೀರ್ಥ ಸ್ವಾಮೀಜಿ ಮಾತನಾಡಿ, ‘ಹಿಂದು ಭಯೋತ್ಪಾದಕರು ಎಂದು ಹೇಳುವವರು ಬುದ್ಧಿ ಜೀವಿಗಳಲ್ಲ, ಅವರು ಲದ್ದಿ ಜೀವಿಗಳು. ನಮ್ಮ ಪುರಾಣ, ಶಾಸ್ತ್ರ ಹೇಳುವುದನ್ನು ಪಾಲಿಸುವವರು ನಾವು. ನ್ಯಾಯದಿಂದ ಜೀವನ ನಡೆಸುತ್ತಿದ್ದೇವೆ’ ಎಂದರು.

ಮುಖಂಡ ಶ್ರೀಶೈಲಗೌಡ ಪಾಟೀಲ ಮಾತನಾಡಿ, ‘ಪೊಲೀಸ್ ಗುಪ್ತಚರ ವಿಭಾಗದ ಮಾಹಿತಿಯ ಪ್ರಕಾರ 10 ಲಕ್ಷ ಜನರು ಈ ಬಡೆ ಇಜ್ತೆಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದು ಆತಂಕಕಾರಿ’ ಎಂದರು.

ಸ್ಥಳಕ್ಕೆ ಬಂದ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು. 

ಮನ್ನಿಕಟ್ಟಿಯ ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಬಾಂಢಗೆ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ ಹಾಗೂ ರಾಜಶೇಖರ ಶಿಲವಂತ, ಬಸವರಾಜ ಯಂಕಂಚಿ, ಅರುಣ ಲೋಕಾಪುರ, ಪ್ರಶಾಂತ ಪವಾರ, ಜಯಪ್ರಕಾಶ ಬೆಂಡಿಗೇರಿ, ಆರ್‌.ಎಸ್.ಎಸ್‌ ಮುಖಂಡ  ಸಿ.ಎಸ್.ಪಾಟೀಲ, ನರೇಂದ್ರ ಕುಪ್ಪಸ್ತ, ಮಲ್ಲೇಶಪ್ಪ ಜಿಗಜಿನ್ನಿ, ವಿಜಯ ಸುಲಾಖೆ, ರವಿ ದಾಮಜಿ, ಮಲ್ಲೇಶ ವಿಜಾಪುರ, ರಾಜಶೇಖರ ಮುದೇನೂರ, ಕೂಡ್ಲಪ್ಪ ಚಿತ್ತರಗಿ, ಮುತ್ತಪ್ಪ ಕುಂಬಾರ ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !