ಪಾತ್ರೋಟರ ಕೃತಿಗಳ ಬಿಡುಗಡೆ ನಾಳೆ

7

ಪಾತ್ರೋಟರ ಕೃತಿಗಳ ಬಿಡುಗಡೆ ನಾಳೆ

Published:
Updated:
Prajavani

ಬಾಗಲಕೋಟೆ: ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟರ ನಾ ಪಟ್ಟ ಪಾಡು ಅದು ನನ್ನ ಹಾಡು, ಹಂಗಿಲ್ಲದ ಅಂಗಳ, ಹೆಜ್ಜೆಗಳೆಲ್ಲ ಮಾತನಾಡಿದಾಗ, ಕಥೆ ಹೇಳಲೇ ಅಜ್ಜ ಕೃತಿಗಳ ಬಿಡುಗಡೆ ಸಮಾರಂಭ ಫೆಬ್ರುವರಿ 14ರಂದು ನಗರದಲ್ಲಿ ನಡೆಯಲಿದೆ.

ಬೀಳಗಿ ತಾಲ್ಲೂಕು ಬಾಡಗಂಡಿಯ ಎಸ್‌.ಆರ್.ಪಾಟೀಲ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿರುವ ಸಮಾರಂಭ ನವನಗರದ ಕಲಾಭವನದಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ಆರಂಭವಾಗಲಿದೆ.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದಾರೆ. ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ, ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಗ್ರಂಥ ಸಮರ್ಪಣೆ ಮಾಡಲಿದ್ದಾರೆ.

ಕಥೆ ಹೇಳಲೇ ಕೃತಿಯನ್ನು ಪಲ್ಲವಿ ಪಾತ್ರೋಟ ಸಂಪಾದನೆ ಮಾಡಿದ್ದರೆ, ಉಳಿದ ಮೂರು ಕೃತಿಗಳನ್ನು ಡಾ.ಜಿ.ವೀರಭದ್ರಗೌಡ ಸಂಪಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !