ಪುಣೆ–ಎಟಿಕೆ ತಂಡಗಳ ಸಮಬಲದ ಪೈಪೋಟಿ

7
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಜಾನ್ ಜಾನ್ಸನ್ ‘ಉಡುಗೊರೆ’ ಗೋಲು

ಪುಣೆ–ಎಟಿಕೆ ತಂಡಗಳ ಸಮಬಲದ ಪೈಪೋಟಿ

Published:
Updated:
Prajavani

ಪುಣೆ: ಪ್ಲೇ ಆಫ್‌ ಹಂತದ ಕನಸು ಕೈಚೆಲ್ಲಿರುವ ಎಫ್‌ಸಿ ಪುಣೆ ಸಿಟಿ ಮತ್ತು ಎಟಿಕೆ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ 2–2ರಿಂದ ಡ್ರಾಗೆ ತೃಪ್ತಿಪಟ್ಟವು.

ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಎಟಿಕೆಯ ಜಾನ್ ಜಾನ್ಸನ್ ಗೋಲಿನ ಉಡುಗೊರೆ ನೀಡಿ ಎದುರಾಳಿ ತಂಡ ‘ಖಾತೆ ತೆರೆದರು’. ಜಯೇಶ್ ರಾಣೆ 23ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಎಟಿಕೆಗೆ ಸಮಾಧಾನ ತಂದುಕೊಟ್ಟರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ಪ್ರಯತ್ನಿಸಿದವು. 61ನೇ ನಿಮಿ ಷದಲ್ಲಿ ಎಡು ಗ್ರೇಸಿಯಾ ಗೋಲು ಗಳಿಸಿ ಎಟಿಕೆ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ಆದರೆ 76ನೇ ನಿಮಿಷದಲ್ಲಿ ಪುಣೆ ಸಿಟಿ ತಿರುಗೇಟು ನೀಡಿತು. ರಾಬಿನ್ ಸಿಂಗ್ ಗೋಲು ಗಳಿಸಿದರು. ಎಟಿಕೆ ಮತ್ತು ಪುಣೆ ಸಿಟಿ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿವೆ.

15 ಪಂದ್ಯಗಳಲ್ಲಿ ಎಟಿಕೆ 21 ಪಾಯಿಂಟ್ ಕಲೆ ಹಾಕಿದ್ದರೆ, ಪುಣೆ ಸಿಟಿ 14 ಪಂದ್ಯಗಳಲ್ಲಿ 15 ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡಿದೆ.

ಬಿಎಫ್‌ಸಿ ಒಟ್ಟು 15 ಪಂದ್ಯಗಳಲ್ಲಿ 31 ಪಾಯಿಂಟ್ ಗಳಿಸಿ ಅಗ್ರ ಸ್ಥಾನದಲ್ಲಿದೆ. 15 ಪಂದ್ಯಗಳಲ್ಲಿ 27 ಪಾಯಿಂಟ್ ಗಳಿಸಿರುವ ಮುಂಬೈ ಸಿಟಿ ಎರಡನೇ ಸ್ಥಾನದಲ್ಲಿದೆ. ಗೋವಾ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಉಳಿದ ಎರಡು ಸ್ಥಾನಗಳಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !