ಸಲಾ ಸಾವು: ಅಣಕಕ್ಕೆ ಅವಕಾಶವಿಲ್ಲ: ಭರವಸೆ

7

ಸಲಾ ಸಾವು: ಅಣಕಕ್ಕೆ ಅವಕಾಶವಿಲ್ಲ: ಭರವಸೆ

Published:
Updated:

ಲಂಡನ್‌ : ಎಮಿಲಿಯಾನೊ ಸಲಾ ಅವರ ಸಾವಿಗೆ ಕಾರಣವಾದ ವಿಮಾನ ದುರಂತವನ್ನು ಅಣಕ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸೌಥಾಂಪ್ಟನ್‌ ಕ್ಲಬ್‌ನ ಆಡಳಿತ ಭರವಸೆ ನೀಡಿದೆ.

ಕಾರ್ಡಿಫ್‌ ತಂಡದ ಪರ ಆಡುತ್ತಿದ್ದ ಅರ್ಜೆಂಟೀನಾದ ಸಲಾ ಅವರು ಇತ್ತೀಚೆಗೆ ಸಾವಿಗೀಡಾಗಿದ್ದರು. ಇದರ ನಂತರ ಕಾರ್ಡಿಫ್‌ ಶನಿವಾರ ಮೊದಲ ಪಂದ್ಯ ಆಡಿತ್ತು.

ಪಂದ್ಯದ ಸಂದರ್ಭದಲ್ಲಿ ಸೌಥಾಂಪ್ಟನ್‌ ತಂಡದ ಬೆಂಬಲಿಗರು ವಿಮಾನ ದುರಂತದ ಅಣಕ ಮಾಡಿದ್ದರು.

‘ಅಣಕ ಮಾಡಿದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ಪೊಲೀಸರ ಜೊತೆ ಚರ್ಚೆ ನಡೆಸಲಾಗಿದೆ’ ಎಂದು ಸೌಥಾಂಪ್ಟನ್‌ ತಂಡದ ಆಡಳಿತ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !