41 ಕೆ.ಜಿ ಹಾಲು ನೀಡಿದ ಹಸು

ಮೈಸೂರು: ಗೋಪಾಲಕರ ಸಂಘದ ವತಿಯಿಂದ ಭಾನುವಾರ ಇಲ್ಲಿ ನಡೆದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಪಾದರಾಯನಪುರದ ಮಾರುತಿ ಡೇರಿ ಫಾರಂಗೆ ಸೇರಿದ ಹಸುವೊಂದು 41 ಕೆ.ಜಿ 800 ಗ್ರಾಂ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿತು.
ಈ ಹಸು ಬೆಂಗಳೂರಿನ ಎಸ್.ರಿಶಿತಾ ಮತ್ತು ಲೀನಾ ಎಂಬುವವರಿಗೆ ಸೇರಿದ್ದು. ನೆಲಮಂಗಲದ ಭಕ್ತನಪಾಳ್ಯದ ಚಂದನ್ ಮುನಿರಾಜು ಎಂಬುವವರಿಗೆ ಸೇರಿದ ಹಸು 40 ಕೆ.ಜಿ 900 ಗ್ರಾಂ (ದ್ವಿತೀಯ), ಬೆಂಗಳೂರಿನ ರಾಜಾಜಿನಗರದ ಜಗನ್ನಾಥ ಕೌಶಿಕ್ ಡೇರಿ ಫಾರಂನ ಹಸು 40 ಕೆ.ಜಿ 700 ಗ್ರಾಂ (ತೃತೀಯ), ಭಕ್ತನಪಾಳ್ಯದ ಚಂದನ್ ಮುನಿರಾಜು ಅವರಿಗೆ ಸೇರಿದ ಹಸು 39 ಕೆ.ಜಿ 250 ಗ್ರಾಂ (ನಾಲ್ಕನೇ) ಹಾಗೂ ಹಿಂಡಿಗನಾಳದ ಚೌಡೇಶ್ವರಿ ಡೇರಿ ಫಾರಂನ ಎಚ್.ಎಂ.ನವೀನ್ಕುಮಾರ್ ಅವರಿಗೆ ಸೇರಿದ ಹಸು 39 ಕೆ.ಜಿ 150 ಗ್ರಾಂ (ಐದನೇ ಸ್ಥಾನ) ಹಾಲು ನೀಡಿತು.
15 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಟ ದರ್ಶನ್ ವಿಜೇತರಿಗೆ ಬಹುಮಾನ ವಿತರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.