ಉತ್ತಮ ದಾರಿಗೆ ಗುರುವಿಗೆ ಶರಣಾಗತರಾಗಿ: ಎಂ.ಆರ್.ಜಯರಾಮ್

7
ಎಲೆಹಳ್ಳಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀದೇವಿ ಭೂದೇವಿ ಸಮೇತ ತಿರುಮಲಸ್ವಾಮಿ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

ಉತ್ತಮ ದಾರಿಗೆ ಗುರುವಿಗೆ ಶರಣಾಗತರಾಗಿ: ಎಂ.ಆರ್.ಜಯರಾಮ್

Published:
Updated:
Prajavani

ಚಿಕ್ಕಬಳ್ಳಾಪುರ: ‘ಮನುಷ್ಯ ಜನ್ಮವನ್ನು ಸಾರ್ಥಪಡಿಸಿಕೊಳ್ಳವ ಕೆಲಸ ಪ್ರತಿಯೊಬ್ಬರಿಂದ ಆದಾಗ ಮಾತ್ರ ಸಮಾಜ ಕೂಡ ಸಮೃದ್ಧಿಯಾಗಿರುತ್ತದೆ’ ಎಂದು ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಹೇಳಿದರು.

ತಾಲ್ಲೂಕಿನ ನಂದಿ ಹೋಬಳಿಯ ಎಲೆಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಶ್ರೀದೇವಿ ಭೂದೇವಿ ಸಮೇತ ತಿರುಮಲಸ್ವಾಮಿ ದೇವಾಲಯದ ಜೀರ್ಣೋದ್ಧಾರ, ನಾಗದೇವತೆ, ಧ್ವಜಸ್ತಂಭ ಹಾಗೂ ವಿಮಾನ ಗೋಪುರ ಕಶಲ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ಮನುಷ್ಯನ ಒಳಿತು, ಕೆಡಕು ಆತನ ಕೈಯಲ್ಲಿದೆ. ಪ್ರತಿಯೊಬ್ಬರೂ ಒಳಿತಾಗಿ ತಮ್ಮ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು. ವ್ಯಕ್ತಿ ಊರು, ಕುಟುಂಬಕ್ಕೂ ಸಹಾಯ ಮಾಡಬೇಕು. ಅದರ ನಡುವೆಯೂ ತನ್ನ ಬಗ್ಗೆಯೂ ಚಿಂತನೆ ನೀನು ಮಾಡಿಕೊಳ್ಳಬೇಕು. ಸಾಯುವಾಗ ಹೆಂಡತಿ–ಮಕ್ಕಳು, ಜಾತಿ, ಕುಲ ಯಾವುದೂ ನಮ್ಮ ಹಿಂದೆ ಬರುವುದಿಲ್ಲ. ಅದೊಂದು ಭ್ರಾಂತಿ ಎಂಬುದು ಅರಿಯಬೇಕು’ ಎಂದು ತಿಳಿಸಿದರು.

‘ಲಕ್ಷಾಂತರ ವರ್ಷಗಳಿಂದ ನಾವು ಹುಟ್ಟು ಸಾವಿನ ನಡುವೆಯೇ ತೊಳಲಾಡುತ್ತಿದ್ದೇವೆ. ಸಿಕ್ಕ ಮಾನವ ಜನ್ಮದಲ್ಲಿ ಉತ್ತಮ ಕೆಲಸಗಳನ್ನು ಮಾಡಿ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು. ಉತ್ತಮ ಕೆಲಸ ಮಾಡಿಸಲು, ದಾರಿ ತೋರಿಸಲು ನಮಗೆ ಗುರು ಬೇಕು. ಯಾವಾಗ ನಾವು ಗುರುವಿಗೆ ಭಕ್ತಿಯಿಂದ ಶರಣಾಗತರಾಗುತ್ತೇವೋ ಆಗ ನಮಗೆ ಉತ್ತಮ ಮಾರ್ಗ ದೊರೆಯುತ್ತದೆ’ ಎಂದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮಿಜಿ, ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ್ಯ ರಾಮಚಂದ್ರರೆಡ್ಡಿ, ದಾಸ ಸಾಹಿತ್ಯ ಪರಿಷತ್ತಿನ ಪುರದಗಡ್ಡೆ ಕೃಷ್ಣಪ್ಪ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !