ಸೈಕ್ಲಿಸ್ಟ್‌ ವೆಂಕಪ್ಪಗೆ ಜಿಲ್ಲಾಡಳಿತದ ಗೌರವ

7

ಸೈಕ್ಲಿಸ್ಟ್‌ ವೆಂಕಪ್ಪಗೆ ಜಿಲ್ಲಾಡಳಿತದ ಗೌರವ

Published:
Updated:
Prajavani

ಬಾಗಲಕೋಟೆ: ‘ಅಮೆರಿಕದ ಬಡ ಕುಟುಂಬದಲ್ಲಿ ಹುಟ್ಟಿದ ಲ್ಯಾನ್ಸ್‌ ಆರ್ಮ್ಸ್‌ಸ್ಟ್ರಾಂಗ್ ಕ್ಯಾನ್ಸರ್‌ಗೆ ತುತ್ತಾದರೂ ಸೈಕ್ಲಿಂಗ್‌ನಲ್ಲಿ ನಾಲ್ಕು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು. ಅವರಂತೆ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ ಕೂಡಾ ಜಿಲ್ಲೆಯ ಆರ್ಮ್ಸ್‌ಸ್ಟ್ರಾಂಗ್ ಆಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಬಣ್ಣಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸೈಕ್ಲಿಸ್ಟ್‌ ವೆಂಕಪ್ಪ ಕೆಂಗಲಗುತ್ತಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಬಡ ಕುಟುಂಬದಲ್ಲಿ ಜನಿಸಿ ಸ್ವಿಡ್ಜರ್‌ಲೆಂಡ್‌ನಲ್ಲಿ ನಡೆದ ಕಿರಿಯರ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ವೆಂಕಪ್ಪ ಬೇರೆ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದಾರೆ’ ಎಂದರು.

‘ಇದುವರೆಗೂ ಪದಕಗಳನ್ನು ಪಡೆದವರನ್ನು ಗಮನಿಸಿದಾಗ ಅವರೆಲ್ಲರೂ ಮೂಲತಃ ಬಡತನದಿಂದಲೇ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಮತ್ತು ಕೇಂದ್ರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ನೀಡಲಾಗುವುದು. ಮುಂದಿನ ದಿನಮಾನಗಳಲ್ಲಿ ಅಪೌಷ್ಠಿಕತೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ ಹಾಗೂ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಿಇಒ ಗಂಗೂಬಾಯಿ ಮಾನಕರ ಜಿಲ್ಲಾಡಳಿತದ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ ಹಾಗೂ ಸೈಕ್ಲಿಂಗ್ ತರಬೇತುದಾರ ಅನಿತಾ ನಿಂಬರಗಿ, ಸೈಕ್ಲಿಸ್ಟ್‌ಗಳಾದ ಅನಿಲ್ ಮಡ್ಡಿ, ಬಸವರಾಜ ಮಡ್ಡಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !