ಬುಧವಾರ, 12–2–1969

7

ಬುಧವಾರ, 12–2–1969

Published:
Updated:

ಪಂಜಾಬ್: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ

ಚಂಡೀಗಡ, ಫೆ.11– ಪಂಜಾಬಿನ ರಾಜಕೀಯ ಭವಿಷ್ಯ ಮತ್ತೆ ತೂಗುಯ್ಯಾಲೆಯಲ್ಲಿ. ಮಧ್ಯಕಾಲೀನ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ.

43 ಸ್ಥಾನಗಳನ್ನು ಗಳಿಸಿರುವ ಅತಿದೊಡ್ಡ ಪಕ್ಷವಾದ ಅಕಾಲಿದಳ, ಎಂಟು ಸ್ಥಾನಗಳನ್ನು ಪಡೆದಿರುವ ತನ್ನ ಮಿತ್ರ ಪಕ್ಷವಾದ ಜನಸಂಘ ಹಾಗೂ ಇಬ್ಬರು ಪಕ್ಷೇತರರ ಬೆಂಬಲದಿಂದ ಸರಕಾರ ರಚಿಸುವ ಸಂಖ್ಯಾಬಲ ತನಗಿದೆಯೆಂದು ಹೇಳಿಕೊಂಡಿದೆ. ಪಂಜಾಬ್ ವಿಧಾನ ಸಭೆಯ ಸದಸ್ಯ ಬಲ 104.

ಉತ್ತರ ಪ್ರದೇಶದಲ್ಲಿ ಬಹುಮತದತ್ತ ಕಾಂಗ್ರೆಸ್

ಲಖನೌ, ಫೆ. 11– ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದತ್ತ ಕುಂಟುತ್ತಾ ಸಾಗಿದೆ.

ಮಂಗಳವಾರ ರಾತ್ರಿ 12 ಗಂಟೆ ಸಮಯದಲ್ಲಿ ಸ್ಪಷ್ಟ ಬಹುಮತ ಪಡೆಯಲು ಇನ್ನು ಕೇವಲ 13 ಸ್ಥಾನಗಳು ಅಗತ್ಯವಾಗಿದ್ದಿತು.

ಕಳೆದ ವಿಧಾನ ಸಭೆಯಲ್ಲಿ ಎರಡನೆ ದೊಡ್ಡ ಪಕ್ಷವಾಗಿದ್ದ ಜನಸಂಘ ಮೂರನೆಸ್ಥಳಕ್ಕಿಳಿದಿದೆ. ಅದರ ಸ್ಥಾನಕ್ಕೆ ಈಗ ಭಾರತೀಯ ಕ್ರಾಂತಿದಳ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !