ಯಡಿಯೂರಪ್ಪಗೆ ಗ್ರಹಗಳ ಕಾಟ: ಹಾಸನ ದಿಕ್ಕಿನ ಮೂರು ಗ್ರಹಗಳಿಗೆ ಶಾಂತಿ!

7

ಯಡಿಯೂರಪ್ಪಗೆ ಗ್ರಹಗಳ ಕಾಟ: ಹಾಸನ ದಿಕ್ಕಿನ ಮೂರು ಗ್ರಹಗಳಿಗೆ ಶಾಂತಿ!

Published:
Updated:
Prajavani

ಮಂಡ್ಯ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗ್ರಹಗಳ ಕಾಟದಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಕಾಳಿಕಾಂಬ ದೇವಾಲಯದಲ್ಲಿ ತಡೆ ಹೊಡೆಸಿದರು.

ಯಡಿಯೂರಪ್ಪ ಅವರ ವಿರುದ್ಧ ಹಲವರು ಷ್ಯಡ್ಯಂತ್ರ ಹೂಡುತ್ತಿದ್ದಾರೆ. ಮಾಡದಿರುವ ತಪ್ಪನ್ನು ಅವರ ಮೇಲೆ ಹೊರಿಸಿದ್ದಾರೆ. ನಮ್ಮ ಕಾಳಮ್ಮ ತಾಯಿ ಅವರೆಲ್ಲರಿಗೂ ಸದ್ಬುದ್ಧಿ ಕೊಡಬೇಕು. ಎಂಟು ದಿಕ್ಕುಗಳಿಂದಲೂ ಅವರಿಗೆ ಒಂದಲ್ಲಾ ಒಂದು ಸಮಸ್ಯೆಗಳೂ ಬರುತ್ತಿದೆ. ಆ ಎಲ್ಲಾ ದಿಕ್ಕುಗಳಿಗೂ ತಡೆ ಹೊಡೆಸಿದ್ದೇವೆ. ವಾಯವ್ಯ ದಿಕ್ಕಿನಲ್ಲಿರುವ ಹಾಸನದ ಮೂರು ಗ್ರಹಗಳಿಂದ ಯಡಿಯೂರಪ್ಪನವರು ಅಪಾರ ಸಮಸ್ಯೆ ಎದುರಿಸುತ್ತಿದ್ದೇವೆ. ಆ ಗ್ರಹಗಳಿವೆ ವಿಶೇಷ ಶಾಂತಿ ಮಾಡಿಸಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದರು.

ಕಾರ್ಯಕರ್ತರಾದ ಶಿವಕುಮಾರ ಆರಾಧ್ಯ, ಕೃಷ್ಣೇಗೌಡ, ಹಾಲಕೆರೆ ಶಿವಣ್ಣ, ಶಂಕರ್‌, ರಾಜೇಶ್‌, ಎಂ.ಸಿ.ವರದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 8

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !