ದ್ರಾವಿಡ್ ಮಾದರಿ ದಾರಿಯಲ್ಲಿ ಪಿಸಿಬಿ!

7

ದ್ರಾವಿಡ್ ಮಾದರಿ ದಾರಿಯಲ್ಲಿ ಪಿಸಿಬಿ!

Published:
Updated:
Prajavani

ಕರಾಚಿ : ಭಾರತ ಜೂನಿಯರ್ ತಂಡಗಳ ಮುಖ್ಯ ರಾಹುಲ್ ದ್ರಾವಿಡ್ ಅವರ ಯಶಸ್ಸು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಗಮನ ಸೆಳೆದಿದೆ.

ಪಿಸಿಬಿಯೂ ಪಾಕಿಸ್ತಾನದ ಮಾಜಿ ಆಟಗಾರರನ್ನು ತನ್ನ ದೇಶದ ಜೂನಿಯರ್ ತಂಡಗಳಿಗೆ ತರಬೇತುದಾರರನ್ನಾಗಿ ನೇಮಕ ಮಾಡಲು ಸಜ್ಜಾಗಿದೆ.  ಪಾಕ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಅವರನ್ನು ಪಾಕಿಸ್ತಾನದ 19 ವರ್ಷದೊಳಗಿನವರ ತಂಡದ ಕೋಚ್ ಮತ್ತು ಮ್ಯಾನೇಜರ್‌ ಆಗಿ ನೇಮಕ ಮಾಡಲು ನಿರ್ಧರಿಸಿದೆ. 

‘ವಿದೇಶಿ ಕೋಚ್‌ಗಳಿಗೆ ಅವಕಾಶ ನೀಡುವ ಬದಲು ಇಲ್ಲಿಯ ಹಿರಿಯ ಆಟಗಾರರಿಗೆ ಮಾನ್ಯತೆ ನೀಡುವುದು ಸೂಕ್ತ. ಅದರಿಂದ ತಮ್ಮ ಅನುಭವವನ್ನು ಜೂನಿಯರ್ ಆಟಗಾರರಿಗೆ ಧಾರೆ ಎರೆಯುತ್ತಾರೆ. ದೇಶದ ಕ್ರಿಕೆಟ್ ಕ್ಷೇತ್ರ ಬಲಿಷ್ಠವಾಗುತ್ತದೆ. ಬಿಸಿಸಿಐ ಮಾದರಿಯನ್ನು ಅನುಸರಿಸುವುದು ಸೂಕ್ತ’ ಎಂದು ಪಿಸಿಬಿಯ ಹಿರಿಯ ಆಡಳಿತಗಾರರು ಈಚೆಗೆ ಹೇಳಿದ್ದರು.

ಶುಭಾಂಗ್ ಆಯ್ಕೆ: ದಕ್ಷಿಣ ಆಫ್ರಿಕಾ 19 ವರ್ಷದೊಳಗಿನವರ ತಂಡದ ವಿರುದ್ಧದ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತ 19 ವರ್ಷದೊಳಗಿನವರ ತಂಡಕ್ಕೆ ಕರ್ನಾಟಕದ ಶುಭಾಂಗ್ ಹೆಗ್ಡೆ ಆಯ್ಕೆಯಾಗಿದ್ದಾರೆ.  ಇದೇ 26ರಿಂದ ತಿರುವನಂತಪುರದಲ್ಲಿ ಪಂದ್ಯಗಳು ನಡೆಯಲಿವೆ.  

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !