ಪ್ರೇಮಿಗಳ ದಿನಕ್ಕೆ ವಿರೋಧ: ಹೂವಿನ ಅಂಗಡಿಗೆ ದಾಳಿ

ಶುಕ್ರವಾರ, ಮೇ 24, 2019
29 °C

ಪ್ರೇಮಿಗಳ ದಿನಕ್ಕೆ ವಿರೋಧ: ಹೂವಿನ ಅಂಗಡಿಗೆ ದಾಳಿ

Published:
Updated:

ಮಂಗಳೂರು: ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ನಗರದ ಕರಂಗಲ್ಪಾಡಿಯ ಹೂವಿನ ಅಂಗಡಿಯೊಂದಕ್ಕೆ ಗುರುವಾರ ಬೆಳಿಗ್ಗೆ ನುಗ್ಗಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು, ಅಲಂಕರಿಸಿ ಇಟ್ಟಿದ್ದ ಹೂಗುಚ್ಛ ಮತ್ತು ಹೂಕುಂಡಗಳಿಗೆ ಹಾನಿಮಾಡಿ ಪರಾರಿಯಾಗಿದ್ದಾರೆ.

ಕರಂಗಲ್ಪಾಡಿಯ ಐರಿಸ್‌ ಫ್ಲವರ್ಸ್‌ ಎಂಬ ಹೂವಿನ ಅಂಗಡಿಯ ಮೇಲೆ ಈ ದಾಳಿ ನಡೆದಿದೆ. ಬೆಳಿಗ್ಗೆ ಅಂಗಡಿಯ ಬಾಗಿಲು ತೆರೆದ ನೌಕರರು, ಪ್ರೇಮಿಗಳ ದಿನದ ಪ್ರಯುಕ್ತ ವಿಶೇಷ ಅಲಂಕಾರ ಮಾಡಿದ್ದರು. ಕೆಲವೇ ಹೊತ್ತಿನಲ್ಲಿ ಬೈಕ್‌ನಲ್ಲಿ ಅಲ್ಲಿಗೆ ಬಂದ ಮೂವರು ಹೂಗುಚ್ಛ ಮತ್ತು ಹೂಕುಂಡಗಳನ್ನು ಕಿತ್ತೆಸೆದಿದ್ದಾರೆ. ನೌಕರರು ತಡೆಯಲು ಬರುತ್ತಿದ್ದಂತೆಯೇ ಮೂವರೂ ಪರಾರಿಯಾಗಿದ್ದಾರೆ.

ಪ್ರೇಮಿಗಳ ದಿನಾಚರಣೆ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ 1,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬಿಗಿ ಬಂದೋಬಸ್ತ್‌ ನಡುವೆಯೇ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !