ರೋಜರ್ ಫೆಡರರ್ ‘ಶತಕ’ ಸಾಧನೆ

ಭಾನುವಾರ, ಮಾರ್ಚ್ 24, 2019
27 °C

ರೋಜರ್ ಫೆಡರರ್ ‘ಶತಕ’ ಸಾಧನೆ

Published:
Updated:
Prajavani

ದುಬೈ: ಟೆನಿಸ್ ತಾರೆ ರೋಜರ್ ಫೆಡರರ್ ಅವರು ಶನಿವಾರ ತಮ್ಮ ವೃತ್ತಿ ಜೀವನದ ನೂರನೇ ಪ್ರಶಸ್ತಿ  ಗೆದ್ದರು. ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಲ್ಲಿ ಮುಕ್ತಾಯವಾದ ದುಬೈ ಟೆನಿಸ್ ಚಾಂಪಿಯನ್‌ಪಿಪ್‌ನಲ್ಲಿ  ಫೆಡರರ್ 6–4, 6–4ರ ನೇರ ಸೆಟ್‌ಗಳಲ್ಲಿ ಗ್ರೀಸ್‌ನ ಸ್ಟಿಫಾನೊಸ್ ಸಿಸಿಪಸ್ ವಿರುದ್ಧ ಜಯಿಸಿದರು. ಇದರೊಂದಿಗೆ ‘ಶತಕ’ ಸಾಧನೆ ಮಾಡಿದರು. ವೃತ್ತಿಜೀವನದಲ್ಲಿ ಒಟ್ಟು 109 ಪ್ರಶಸ್ತಿಗಳನ್ನು ಗೆದ್ದ ದಾಖಲೆಯು ಅಮೆರಿಕದ ಜಿಮ್ಮಿ ಕಾನರ್ಸ್ ಅವರ ಹೆಸರಿನಲ್ಲಿದೆ.  ಇದೀಗ ಅವರ ನಂತರದ ಸ್ಥಾನದಲ್ಲಿ ಫೆಡರರ್ ಇದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಫೆಡರರ್ ಅವರು 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.  ಈ ಹಾದಿಯಲ್ಲಿ ಅವರು ತಾವಾಡಿದ ಟೂರ್ನಿಗಳಲ್ಲಿ ಒಟ್ಟಾರೆ 152 ಬಾರಿ ಫೈನಲ್‌ ಪ್ರವೇಶಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಡಬಲ್ಸ್‌ ಟೆನಿಸ್‌ನಲ್ಲಿ ಚಿನ್ನ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿಪದಕ ಜಯಿಸಿದ್ದರು. ಅಂತರರಾಷ್ಟ್ರೀಯ ಟೆನಿಸ್ ರ‍್ಯಾಂಕಿಂಗ್ ಪಟ್ಟಿಯ ಏಳನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !