ಬೆಂಗಳೂರು– ಮಂಗಳೂರು ಹೆದ್ದಾರಿಯಲ್ಲಿ ಉರುಳಿದ ಅನಿಲ ಟ್ಯಾಂಕರ್‌, ಸಂಚಾರ ಸ್ಥಗಿತ

ಶುಕ್ರವಾರ, ಮಾರ್ಚ್ 22, 2019
21 °C

ಬೆಂಗಳೂರು– ಮಂಗಳೂರು ಹೆದ್ದಾರಿಯಲ್ಲಿ ಉರುಳಿದ ಅನಿಲ ಟ್ಯಾಂಕರ್‌, ಸಂಚಾರ ಸ್ಥಗಿತ

Published:
Updated:

ಮಂಗಳೂರು: ಬೆಂಗಳೂರು– ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಸಮೀಪದ ನೆಲ್ಯಾಡಿ ಬಳಿಯ ಲಾವತಡ್ಕ ಸಮೀಪದ ಇಂಜಿರ ಎಂಬಲ್ಲಿ ಭಾನುವಾರ ಮಧ್ಯಾಹ್ನ ಎಲ್‌ಪಿಜಿ ಅನಿಲ ಸಾಗಣೆ ಟ್ಯಾಂಕರ್‌ ಉರುಳಿಬಿದ್ದಿದೆ. ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಟ್ಯಾಂಕರ್‌ ಬೆಂಗಳೂರಿನ ಕಡೆಗೆ ಅನಿಲ ಸಾಗಿಸುತ್ತಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮಧ್ಯದಲ್ಲಿ ಪಲ್ಟಿಯಾಗಿದೆ. ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರಿನತ್ತ ಬರುತ್ತಿರುವ ಎಲ್ಲ ವಾಹನಗಳನ್ನು ಕಡಬ ಮಾರ್ಗವಾಗಿ ಕಳುಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಬೆಂಗಳೂರಿನ ಕಡೆಗೆ ಹೊರಟಿದ್ದ ವಾಹನಗಳನ್ನು ಮಾರ್ಗ ಬದಲಿಸಿ ಚಾರ್ಮಾಡಿ ಘಾಟಿ ಮೂಲಕ ಕಳುಹಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !